ಸಿಂಧನೂರು: ಜವಳಗೇರಾ ನಾಡಗೌಡರ ಸರ್ಕಾರಿ ಹೆಚ್ಚುವರಿ ಭೂಮಿ, ಭೂರಹಿತರಿಗೆ ವಿತರಿಸಲು ಆಗ್ರಹಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನಿಂದ ಮಹಾಧರಣಿ

Spread the love

ನಮ್ಮ ಸಿಂಧನೂರು, ನವೆಂಬರ್ 11
ಜವಳಗೇರಾ ನಾಡಗೌಡರ ಸರಕಾರಿ ಹೆಚ್ಚುವರಿ 1064 ಎಕರೆ ಭೂಮಿಯನ್ನು ಭೂರಹಿತರಿಗೆ ಹಂಚಿಕೆ ಮಾಡಲು ಆಗ್ರಹಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ (ಎಐಕೆಕೆಎಸ್) ತಾಲೂಕು ಸಮಿತಿ ವತಿಯಿಂದ ಸೋಮವಾರದಿಂದ ತಹಸೀಲ್ ಕಾರ್ಯಾಲಯದ ಮುಂದೆ ಮಹಾಧರಣಿ ಆರಂಭಿಸಲಾಯಿತು. ಸಿಂಧನೂರು ಸಿಡಿದೆದ್ದ ಭೂ ಸಂಘರ್ಷ ಕಳೆದ 6 ತಿಂಗಳು ಹಗಲು ರಾತ್ರಿ ಸರಣಿ ಧರಣಿ ನಡೆಸುವ ಮೂಲಕ ಗಮನ ಸೆಳೆದಿದ್ದು, ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಸಿಂಧನೂರು ಭೂ ನ್ಯಾಯ ಮಂಡಳಿ ರಚನೆಮಾಡಿದೆ. ಮುಂದಿನ ಭೂ ನ್ಯಾಯ ಮಂಡಳಿ ಸಭೆಯಲ್ಲಿ ಜವಳಗೇರಾ ಸರ್ವೆ ನಂ.429 ಹಾಗೂ ಸರ್ವೆ ನಂ.186ರ ಜಮೀನಿನ ಕಬ್ಜಾದಿಂದ ನಕಲಿ ವಾರಸುದಾರರನ್ನು ಹೊರಹಾಕಬೇಕು ಹಾಗೂ ಸರಕಾರಿ ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ಹಂಚಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಸೇರಿದಂತೆ ಭೂರಹಿತರು ಇದ್ದರು.


Spread the love

Leave a Reply

Your email address will not be published. Required fields are marked *