ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 19
ತಾಲೂಕಿನ ಕುನ್ನಟಗಿ ಕ್ಯಾಂಪ್ ಬಳಿ ಸರಕು ತುಂಬಿಕೊಂಡು ಸಿಂಧನೂರು ಮಾರ್ಗದಿಂದ ಮಸ್ಕಿ ಕಡೆಗೆ ಹೊರಟಿದ್ದ ಲಾರಿಯೊಂದು ಗದ್ದೆಗೆ ಪಲ್ಟಿಯಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಆಂಧ್ರ ಪಾಸಿಂಗ್ ಹೊಂದಿರುವ ಲಾರಿಯಲ್ಲಿ ನೆಲಹಾಸು ಬಂಡೆಗಳನ್ನು ಸಾಗಿಸಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಲಾರಿ, ಸಸಿಮಡಿ ಹಾಕಿರುವ ಗದ್ದೆಗೆ ಉರುಳಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ.