ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 6
ನಗರದ ತಹಸಿಲ್ ಕಚೇರಿಗೆ ದಿನಾಂಕ: 06-01-2026 ಮಂಗಳವಾರದಂದು ಲೋಕಾಯುಕ್ತ ತಂಡದ ಅಧಿಕಾರಿಗಳು ಬೆಳಿಗ್ಗೆಯೇ ಭೇಟಿ ನೀಡಿದರು. ಬೆಳಿಗ್ಗೆಯಿಂದಲೂ ಮಧ್ಯಾಹ್ನದವರೆಗೂ ಪರಿಶೀಲನೆಯಲ್ಲಿ ತೊಡಗಿದ್ದು ಕಂಡುಬಂತು. ತಹಸಿಲ್ ಕಾರ್ಯಾಲಯದ ಲೆಕ್ಕವಿಭಾಗ, ನೋಂದಣಿ ಇಲಾಖೆಯ ಕಾರ್ಯಾಲಯ, ಭೂ ದಾಖಲೆಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕಾರ್ಯಾಲಯಗಳಲ್ಲಿ ತಂಡದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬೆಳಿಗ್ಗೆ 3 ಮೂವರು ತಂಡ ಭೇಟಿ ನೀಡಿದ ಬಗ್ಗೆ ಮೂಲಗಳು ತಿಳಿಸಿವೆ.

ಬಿಕೋ ವಾತಾವರಣ
ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದ ಹಿನ್ನೆಲೆಯಲ್ಲಿ ತಹಸಿಲ್ ಕಚೇರಿಯ ಆವರಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಬಿಕೋ ವಾತಾವರಣ ಕಂಡುಬಂತು. ದಿನವೂ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಕಚೇರಿ ಹಾಗೂ ಆವರಣದಲ್ಲಿ ಮಧ್ಯಾಹ್ನ 2 ಗಂಟೆಯ ವೇಳೆ ಖಾಲಿ ಖಾಲಿ ವಾತಾವರಣ ಕಂಡುಬAತು. ಬೆರಳೆಣಿಕೆಯಷ್ಟು ಜನರು ಕಚೇರಿಯತ್ತ ಧಾವಿಸುತ್ತಿದ್ದುದು ಗಮನ ಸೆಳೆಯಿತು. ಇನ್ನೂ ತಹಸಿಲ್ ಕಾರ್ಯಾಲಯಕ್ಕೆ ಬಂದ ವಿರಳ ಜನರು ಕಚೇರಿಯ ಅಧಿಕಾರಿಗಳನ್ನು ಮಾಹಿತಿ ಕೇಳುತ್ತಿದ್ದಂತೆ ನಯ, ನಾಜೂಕಿನಿಂದ ಮಾಹಿತಿ ನೀಡಿದ್ದು, ಕೆಲವರಿಗೆ ಅಚ್ಚರಿಯೆನಿಸಿತು.

ನೋಂದಣಿ ಕಾರ್ಯಾಲಯ
ಸದಾ ಗಿಜಗುಡುತ್ತಿದ್ದ ನೋಂದಣಿ ಕಾರ್ಯಾಲಯದಲ್ಲಿ ಮಂಗಳವಾರ ಅಷ್ಟೊಂದು ಜನರು ಕಂಡುಬರಲಿಲ್ಲ. ಇನ್ನೂ ಮಧ್ಯಾಹ್ನದ ವೇಳೆ ನಾಲ್ಕಾರು ಜನರು ಮಾತ್ರ ಇದ್ದದ್ದು ಕಂಡುಬಂತು.
ಅಲರ್ಟಾದ ಅಧಿಕಾರಿಗಳು
ತಹಸಿಲ್ ಕಚೇರಿಗೆ ಲೋಕಾಯುಕ್ತ ತಂಡ ಭೇಟಿ ನೀಡಿದೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅಲರ್ಟ್ ಆದ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.

