ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 03
ಗುಲಾಬಿ ಹೂ ಕೊಟ್ಟು ‘ಥ್ಯಾಂಕ್ಸ್ ಡಾಕ್ಟ್ರೇ’ ಎಂದ ಪುಟಾಣಿಗಳು ! ಆಸ್ಪತ್ರೆಯಲ್ಲಿ ಬೆಳಗ್ಗೆಯೇ ಮಕ್ಕಳ ಕಲರವ.. ನಗೆಯ ಸಿಂಚನ, ಕೆಲಹೊತ್ತು ಮಕ್ಕಳೊಂದಿಗೆ ಮಕ್ಕಳಾದ ವೈದ್ಯರು…!! ಗುರುವಾರ ನಗರದ ಗಂಗಾವತಿ ಮಾರ್ಗದದ ಐಬಿ (ಪ್ರವಾಸಿ ಮಂದಿ) ಪಕ್ಕದಲ್ಲಿರುವ ಚೇತನಾ ಆಸ್ಪತ್ರೆಯಲ್ಲಿ ಕಂಡುಬಂದ ದೃಶ್ಯಗಳಿವು.
ವೈದ್ಯರ ದಿನಾಚರಣೆಯ ನಿಮಿತ್ತ ನಗರದ ಪಾಟೀಲ್ ಶಿಕ್ಷಣ ಸಂಸ್ಥೆಯ, ಪಾಟೀಲ್ ಪ್ರಿ ಪ್ರೀಮಿಯರ್ ಶಾಲಾ ಮಕ್ಕಳು, ಆಸ್ಪತ್ರೆಯ ವೈದ್ಯ ಡಾ.ನಾಗರಾಜ ಮಾಲಿಪಾಟೀಲ್ ಹಾಗೂ ಮಕ್ಕಳ ತಜ್ಞೆ ಡಾ.ಸವಿತಾ ಮಾಲಿ ಪಾಟೀಲ್ ಅವರಿಗೆ ಗುಲಾಬಿ ಹೂ ನೀಡಿ ಅಭಿನಂದಿಸಿದರು. ಪುಟಾಣಿಗಳಿಂದ ಅಭಿನಂದನೆ ಸ್ವೀಕರಿಸಿದ ವೈದ್ಯ ದಂಪತಿಗಳು ಮಕ್ಕಳಿಗೆ ಸಿಹಿ ವಿತರಿಸಿ ಸಂತಸ ಹಂಚಿಕೊಂಡರು. ನಂತರ ಶಿಕ್ಷಣ ಸಂಸ್ಥೆಯಿಂದ ವೈದ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಭಾರತಿ ಕೃಷ್ಣ ನೆಕ್ಕಂಟಿ, ಶಿಕ್ಷಕಿಯರು, ಆಸ್ಪತ್ರೆ ಸಿಬ್ಬಂದಿ ಇನ್ನಿತರರಿದ್ದರು.

