ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 4
ತಾಲೂಕಿನಾದ್ಯಂತ ಭತ್ತದ ಕೊಯ್ಲು ಬಿರುಸಿನಿಂದ ನಡೆದಿದ್ದು, ದಿನಾಂಕ: 04-11-2025 ಗುರುವಾರ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಕಂಡುಬಂದು, 4.30ರ ಸುಮಾರು ಅಲ್ಲಲ್ಲಿ ತುಂತುರು ಮಳೆ ಸುರಿದ ವರದಿಯಾಗಿದೆ. ಇದರಿಂದ ಭತ್ತ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಪ್ರಸಕ್ತ ಹಂಗಾಮಿನಲ್ಲಿ ಎಲೆಚುಕ್ಕೆ ರೋಗ, ಬಡ್ಡೆ ಕೊರೆಯುವ ರೋಗ, ವೈರಸ್ ಹಾಗೂ ಅತಿವೃಷ್ಟಿಯಿಂದ ಭತ್ತದ ಇಳುವರಿ ಅರ್ಧದಷ್ಟು ಕುಸಿದಿದ್ದು ಈಗಾಗಲೇ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಈ ನಡುವೆ ಪುನಃ ಮೋಡ ಕವಿದ ವಾತಾವರಣ ಆತಂಕಿತರನ್ನಾಗಿ ಮಾಡಿದೆ.
“ಈಗ ಮತ್ತೆ ಮಳೆ ಸುರಿದರೆ ಇನ್ನಷ್ಟು ಲಾಸ್”
ಅಲ್ಲದೇ ಇನ್ನೂ ಕಟಾವು ನಡೆದಿದ್ದು, ಮತ್ತೆ ಮಳೆ ಸುರಿದರೆ ಬಹಳಷ್ಟು ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಕೊಯ್ಲು ಮಾಡಿದ ಭತ್ತದ ರಾಶಿಯನ್ನು ಸಂರಕ್ಷಣೆ ಮಾಡಲು ಸಮಸ್ಯೆಯಾಗುತ್ತದೆ ಎಂದು ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ. “ಇನ್ನೂ ಮೋಡ ಕವಿದ ವಾತಾವರಣವನ್ನು ನೋಡಿ ದಲ್ಲಾಳಿಗಳು ಅಡ್ಡಾದುಡ್ಡಿಗೆ ಭತ್ತ ಕೇಳುತ್ತಿದ್ದಾರೆ. ಅನಿವಾರ್ಯವಾಗಿ ರೈತರು ಮಾರಾಟ ಮಾಡಬೇಕಾಗಿ ಬಂದಿದೆ ಎಂದು ಮತ್ತೊಬ್ಬ ರೈತರು ನೊಂದು ಹೇಳುತ್ತಾರೆ.

