ನಮ್ಮ ಸಿಂಧನೂರು, ಅಕ್ಟೋಬರ್ 10
ಸಮಾಜದಲ್ಲಿ ಅಸಹಾಯಕರು, ನೊಂದವರ ಬಗೆಗಿನ ಕಾಳಜಿ ಶ್ರೇಯೋಭಿವೃದ್ಧಿಯನ್ನು ಹೆಚ್ಚಿಸುತ್ತದೆ. ದುಡಿಮೆಯಲ್ಲಿ ಒಂದಿಷ್ಟನ್ನಾದರೂ ವಿಕಲಚೇತನರು, ಬುದ್ಧಿಮಾಂದ್ಯರು ಹಾಗೂ ಬಡವರಿಗೆ ವ್ಯಯಿಸಿ ಬದುಕು ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದು ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ್ ಹೇಳಿದರು.
ನಗರದ ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ‘ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಎಂ.ಬಸವರಾಜ ಪಡಕೋಟೆ ಅವರ ಜನ್ಮ ದಿನದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಮಾತನಾಡಿದರು. ತಾಲೂಕು ಗೌರವಾಧ್ಯಕ್ಷ ಅವಿನಾಶ ದೇಶಪಾಂಡೆ, ನಗರ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಹನುಮಂತ, ಜಿಲ್ಲಾ ಗೌರವಾಧ್ಯಕ್ಷ, ಮಹೆಮೂದ್ ಖಾದ್ರಿ ಗೋಮರ್ಸಿ, ತಾಲೂಕು ಉಪಾಧ್ಯಕ್ಷ ಗದ್ದೆಪ್ಪ ಉಪ್ಪಾರ ಉಪಸ್ಥಿತರಿದ್ದರು.
ಜಿಲ್ಲಾ ಸಂಚಾಲಕ ಹುಸೇನ್ ಭಾಷಾ ಇಂದಿರಾನಗರ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬೂದೇಶ ಮರಾಠಿ, ತಾಲೂಕು ಗ್ರಾಮೀಣ ಘಟಕ ಕಾರ್ಯದರ್ಶಿ ಮಲ್ಲಿಕಾರ್ಜುನ ಕುನ್ನಟಗಿ, ತಾಲೂಕು ಸಂಘಟನಾ ಕಾರ್ಯದರ್ಶಿ ರಾಘು ಆಲ್ಲೂರಕರ್, ತಾಲೂಕು ಗ್ರಾಮೀಣ ಉಪಾಧ್ಯಕ್ಷ ಸೋಮಲಿಂಗ, ಶರಣಪ್ಪ ಬೆಳಗುರ್ಕಿ, ಸಂತೋಷ ಹಿರೇಮಠ, ಅಶೋಕ್.ಎಂ., ರುದ್ರಗೌಡ, ಅಬ್ದುಲ್ ನಬಿ, ಶರೀಫ್, ಆಶ್ರಮದ ಆಡಳಿತಾಧಿಕಾರಿ ಡಾ.ಚನ್ನಬಸವ ಸ್ವಾಮಿ ಹಿರೇಮಠ, ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ, ಮರಿಯಪ್ಪ, ಶರಣಮ್ಮ ಇನ್ನಿತರರು ಪಾಲ್ಗೊಂಡಿದ್ದರು.