ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 7
ಸಿದ್ದರಾಮಯ್ಯ ಅವರು 7 ವರ್ಷ 240 ದಿನದ ರಾಜ್ಯ ಆಡಳಿತವನ್ನು ಮುನ್ನಡೆಸುವ ಮೂಲಕ ನೂತನ ದಾಖಲೆ ಬರೆದಿದ್ದಾರೆ. ಉಳಿದ ಅವಧಿಗೂ ಸಿಎಂ ಆಗಿ ಅವರು ಆಡಳಿತ ನಡೆಸುವ ಮೂಲಕ ದಾಖಲೆ ಬರೆಯಲಿ ಆ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿ ಎಂದು ತಾಲೂಕು ಅಹಿಂದ ಜನಸಂಘದ ಪರಶುರಾಮ.ಕೆ ಹೇಳಿದರು.
ನಗರದ ಎಪಿಎಂಸಿಯಲ್ಲಿ ತಾಲೂಕು ಅಹಿಂದ ಜನಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಾಮಾಜಿಕ ಮತ್ತು ಜನಪರ ಕಾಳಜಿಯುಳ್ಳ ಸಿಎಂ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಬಡವರು, ದೀನ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಹಾಗೂ ಹಿಂದುಳಿದ ವರ್ಗಗಳ ನೆಚ್ಚಿನ ಕಣ್ಮಣಿಯಾಗಿದ್ದಾರೆ. ತಮ್ಮ ಸಚಿವ ಸಂಪುಟದಲ್ಲಿ ಶೋಷಿತ ಸಮುದಾಯಗಳ ಚುನಾಯಿತ ಪ್ರತಿನಿಧಿಗಳಿಗೆ ಪ್ರಮುಖ ಖಾತೆಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಅತ್ಯುತ್ತಮ ಬಜೆಟ್ಗಳನ್ನು ಮಂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ದೊಡ್ಡನಗೌಡ ಕಲ್ಲೂರು, ಕಾರ್ಯದರ್ಶಿ ಫಕೀರಪ್ಪ ಬಾಗೋಡಿ, ಮೈಲಾರ ಮಲ್ಲಪ್ಪ, ಶಿವರಾಜ ಹಸಮಕಲ್, ಬಸವರಾಜ ಗೊರೇಬಾಳ, ಗದ್ದೆಪ್ಪ, ಗಂಗಾಧರ, ಶಿವು ಹೊಸಳ್ಳಿ, ಲಿಂಗಪ್ಪ, ವಿಜಯ ನಹರಾ, ಲಲಿತ್ ಶೇಟ್, ಭೀಮಣ್ಣ, ರಫೀಸಾಬ್, ಹನುಮೇಶ ಬಾಗೋಡಿ, ತಾಯಪ್ಪ, ಅಯ್ಯಪ್ಪ ಕ್ಯಾತ್ನಟ್ಟಿ, ಬಸವರಾಜ ಇನ್ನಿತರರು ಇದ್ದರು.

