Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 25

ನಗರದ ಪಾಟೀಲ್ ಶಿಕ್ಷಣ ಸಂಸ್ಥೆಯ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ವಿಜಯಪುರ ಅಕ್ಕಮಹಾದೇವಿ ವಿವಿಯ 2024-25ನೇ ಸಾಲಿನ ಬಿಎಸ್ಸಿ, ಬಿಕಾಂ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರ‍್ಯಾಂಕ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಬಿಕಾಂನಲ್ಲಿ ಲಕ್ಷ್ಮಿಸಿಂಗ್ ತಂದೆ ಶಂಕರ್‌ಸಿಂಗ್ 5ನೇ ರ‍್ಯಾಂಕ್ ಹಾಗೂ ಬಿ.ಎಸ್ಸಿಯಲ್ಲಿ ಶ್ವೇತಾ ಮೇಟಿ ತಂದೆ ದೇವರಡ್ಡಿ ಮೇಟಿ 7ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯಮಟ್ಟದ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಆರ್.ಪಂಪಾಪತಿ ಪಾಟೀಲ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶರಣಬಸವ ವಕೀಲರು, ಕಾರ್ಯದರ್ಶಿ ಆರ್.ಸಿ.ಪಾಟೀಲ್, ಆಡಳಿತಾಧಿಕಾರಿ ಭಾರತಿಕೃಷ್ಣ ನೆಕ್ಕಂಟಿ, ಪ್ರಾಚಾರ್ಯ ಮಾರುತಿ ಭಂಡಾರ್‌ಕರ್ ಹಾಗೂ ಉಪನ್ಯಾಸಕರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ


Spread the love

Leave a Reply

Your email address will not be published. Required fields are marked *