ಸಿಂಧನೂರು: ಜೋಳ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ 15 ದಿನ ವಿಸ್ತರಿಸಲು ಕೆಆರ್‌ಎಸ್ ಆಗ್ರಹ

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 26

ಖರೀದಿ ಕೇಂದ್ರಗಳಲ್ಲಿ ಜೋಳ ಖರೀದಿ ಪ್ರಕ್ರಿಯೆಯನ್ನು ಜುಲೈ 15 ದಿನಾಂಕಿನವರೆಗೆ ವಿಸ್ತರಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟç ಸಮಿತಿ ಪಕ್ಷದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ರವಾನಿಸಿದ್ದಾರೆ.
ಈ ವೇಳೆ ಕೆಆರ್‌ಎಸ್ ರಾಜ್ಯ ರೈತ ಘಟಕದ ಪ್ರಧಾನ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಮಾತನಾಡಿ, ಸರ್ಕಾರ ಸರಿಯಾದ ಸಮಯಕ್ಕೆ ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡದಿರುವುದು ಹಾಗೂ ಹಲವು ಅವೈಜ್ಞಾನಿಕ ನಿಬಂಧನೆಗಳನ್ನು ವಿಧಿಸಿ ಗೊಂದಲ ಸೃಷ್ಟಿಸಿದ್ದರಿಂದ ರೈತರು ಸಮಸ್ಯೆಗೊಳಗಾಗಿದ್ದಾರೆ. ಖರೀದಿ ಕೇಂದ್ರದಲ್ಲಿ ಜೋಳ ಖರೀದಿಗೆ ಜೂನ್ 30 ಕೊನೆಯ ದಿನ ನಿಗದಿಪಡಿಸಿದ್ದು, ನೋಂದಣಿಯಾದ ಎಲ್ಲ ರೈತರು ಜೋಳದ ಕೇಂದ್ರಕ್ಕೆ ತೂಕ ಮಾಡಿ ಜೋಳ ಸಾಗಿಸುವಲ್ಲಿ ಸಾಧ್ಯವಾಗದ ಕಾರಣ, ಸಾವಿರಾರು ಕ್ವಿಂಟಲ್ ಜೋಳ ರೈತರ ಬಳಿ ಉಳಿದಿದ್ದು, ದಿನಾಂಕ ವಿಸ್ತರಿಸದೇ ಹೋದರೆ ಈ ರೈತರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹಾಗಾಗಿ ದಿನಾಂಕ ವಿಸ್ತರಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ವೇಳೆ ಪಕ್ಷದ ಮುಖಂಡರಾದ ಶರಣಪ್ಪ ಬೇರಿಗಿ, ಶರಣಪ್ಪ ಜನತಾ ಕಾಲೋನಿ, ಅಜೀದ್ ಕುನಟಗಿ, ಕನಕಪ್ಪ ಎಲೆಕೂಡ್ಲಿಗಿ, ಹನುಮಂತ ಸುಕಾಲಪೇಟೆ, ಜಗದೀಶ್ ಸುಲ್ತಾನಾಪುರ, ಶಂಸುದ್ದೀನ್ ಗೋಮರ್ಸಿ, ಹನುಮಂತ ಮುದ್ದಾಪುರ ಇನ್ನಿತರರಿದ್ದರು.


Spread the love
ಟ್ಯಾಗ್‌ಗಳು:

Leave a Reply

Your email address will not be published. Required fields are marked *