ಇಂಟರೆಸ್ಟಿAಗ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 6
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವವರು, ಟಿಕೆಟ್‌ನಲ್ಲಿ ಅಪಭ್ರಂಶವಾದ ಸ್ಥಳಗಳ ಮುದ್ರಣದಿಂದ ಹೌರಾತ್ತಿದ್ದಾರೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ? ಬಸ್ ನಿರ್ವಾಹಕರು ಕೊಟ್ಟಿರುವ ಟಿಕೆಟ್ ಯಾವ ಊರಿನದು ? ಅಂತಹ ಊರೇನಾದರೂ ಇದೆಯಾ ? ಎಂದು ಪರೇಶಾನ್ ಆಗುತ್ತಿದ್ದಾರೆ !! ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.
ಕ.ಕ.ರ.ಸಾ.ನಿಗಮದ ಹೊಸಪೇಟೆ ಘಟಕದ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ದಿನಾಂಕ: 04-09-2025ರಂದು ಸಿಂಧನೂರಿನಿAದ ಪೋತ್ನಾಳ ಗ್ರಾಮಕ್ಕೆ ಪ್ರಯಾಣಿಸಿದ್ದಾರೆ. ಈ ವೇಳೆ ನಿರ್ವಾಹಕರು ಪ್ರಯಾಣಿಕರಿಗೆ ನೀಡಿದ ಟಿಕೆಟ್‌ನಲ್ಲಿ ಇಂಗ್ಲಿಷ್‌ನಲ್ಲಿ ‘ಸಿಧನೂರ-ಪೊಯ್ಹಾಲ್’ ಎಂದು ಆಂಗ್ಲ ಭಾಷೆಯಲ್ಲಿ ಮುದ್ರಿವಾಗಿದ್ದು, ಈ ಟಿಕೆಟ್ ನೋಡಿ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ರೂ.40 ಮೊತ್ತದ ಟಿಕೆಟ್‌ನಲ್ಲಿ ಸಿಂಧನೂರು-ಪೋತ್ನಾಳ ಎಂದು ಮುದ್ರಿತವಾಗಬೇಕಿದ್ದು, ಇಂಗ್ಲಿಷ್ ಅಕ್ಷರ ದೋಷಗಳಿಂದ ತಪ್ಪಾಗಿ ಮುದ್ರಿವಾಗಿದ್ದು ಪ್ರಯಾಣಿಕರ ಗೊಂದಲಕ್ಕೆ ಕಾರಣವಾಗಿದೆ.
‘ಗೊತ್ತಿಲ್ಲದ ಪ್ರಯಾಣಿಕರ ಪರಿಸ್ಥಿತಿ ಹೇಗೆ ?’
‘ಈ ಮಾರ್ಗದಲ್ಲಿ ದಿನವೂ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಮಾನ್ಯವಾಗಿ ವಯಾದಲ್ಲಿ ಬರುವ ಗ್ರಾಮ ಹಾಗೂ ಪಟ್ಟಣಗಳ ತಿಳಿವಳಿಕೆ ಇರುತ್ತದೆ. ಆದರೆ ಹೊಸದಾಗಿ ಪ್ರಯಾಣಿಸುವವರಿಗೆ ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ನಿಲುಗಡೆ ಪ್ರದೇಶದಲ್ಲಿ ಪ್ರಯಾಣಿಕರು ಇಳಿಯಲು ಸಮಸ್ಯೆಯಾಗಿದೆ, ಅಲ್ಲದೇ ಇದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗುತ್ತದೆ’ ಎಂದು ಪ್ರಯಾಣಿಕರೊಬ್ಬರು ಹೇಳುತ್ತಾರೆ.
