ಸಿಂಧನೂರು: ಮೃತ ಬಾಣಂತಿಯರ ಕುಟುಂಬದವರಿಗೆ ಮೈಸೂರಿನ ಸಾಯಿ ರಾಜರಾಜೇಶ್ವರಿ ಟ್ರಸ್ಟ್‌ನಿಂದ ಕಿಟ್ ವಿತರಣೆ

Spread the love

ನಮ್ಮ ಸಿಂಧನೂರು, ಡಿಸೆಂಬರ್ 17
ಹೆರಿಗೆಯ ನಂತರ ಮೃತಪಟ್ಟ ಸಿಂಧನೂರು ತಾಲೂಕಿನ ಮೂರು ಕುಟುಂಬದ ಸದಸ್ಯರಿಗೆ ಮೈಸೂರಿನ ಶ್ರಿಮದ್ ಸಾಯಿ ರಾಜರಾಜೇಶ್ವರಿ ಟ್ರಸ್ಟ್ (ರಿ) ವತಿಯಿಂದ ಉಚಿತವಾಗಿ ದಿನಸಿ, ನವಜಾತ ಶಿಶುಗಳ ಉಡುಪು, ನವಜಾತು ಶಿಶುಗಳನ್ನು ಪೋಷಣೆ ಮಾಡುವ ಸಂಬಂಧಿಕರಿಗೆ ಬಟ್ಟೆಬರೆ ಸೇರಿದಂತೆ ಇನ್ನಿತರೆ ಸಾಮಗ್ರಿಗಳಿರುವ ಕಿಟ್‌ನ್ನು ಟ್ರಸ್ಟ್ನ ಶ್ರೀನಿವಾಸ ಸೇರಿದಂತೆ ಮಹಿಳಾ ಸದಸ್ಯರು ಮಂಗಳವಾರ ಸಂಜೆ ವಿತರಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಆರ್.ಎಚ್.ಕ್ಯಾಂಪ್ 3 ಮೌಸಂಬಿ ಮಂಡಲ್, ಉದ್ಬಾಳ.ಜೆ ಗ್ರಾಮದ ಚಂದ್ರಕಲಾ, ಅಂಕುಶದೊಡ್ಡಿಯ ರೇಣುಕಮ್ಮ ಮೃತ ಬಾಣಂತಿಯರ ಸಂತ್ರಸ್ತ ಕುಟುಂಬಗಳಿಗೆ ಕಿಟ್‌ನ್ನು ವಿತರಿಸಲಾಯಿತು.
ಮಾನವೀಯತೆಯೇ ನಿಜವಾದ ಧರ್ಮ: ಶ್ರೀನಿವಾಸ
ಸಂಕಷ್ಟದಲ್ಲಿರುವವರಿಗೆ ಸಹಾಯ, ಸಹಕಾರ ನೀಡುವ ಮೂಲಕ ಮಿಡಿಯುವುದೇ ನಿಜವಾದ ಮಾನವೀಯತೆ. ಇತ್ತೀಚಿಗೆ ಬಾಣಂತಿಯರ ಸರಣಿ ಸಾವಿನ ಕುರಿತು ಮಾಧ್ಯಮಗಳಲ್ಲಿನ ಸುದ್ದಿಯನ್ನು ಗಮನಿಸಿದ ಮೈಸೂರಿನ ನಮ್ಮ ಟ್ರಸ್ಟ್ನವರು ಅವರಿಗೆ ಸಹಾಯಹಸ್ತ ಚಾಚುವ ಹಿನ್ನೆಲೆಯಲ್ಲಿ ಈ ಕಿಟ್ ವಿತರಿಸಲಾಗಿದೆ. ಈಗಾಗಲೇ ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಸಂತ್ರಸ್ತ ಕುಟುಂಬಗಳಿಗೆ ಭೇಟಿ ನೀಡಿ ಅವರಿಗೂ ಸಹ ಕಿಟ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಮಹಿಳಾ ಸದಸ್ಯರು ಹಾಗೂ ಸಂತ್ರಸ್ತ ಕುಟುಂಬದವರು ಇದ್ದರು.


Spread the love
ಟ್ಯಾಗ್‌ಗಳು:

Leave a Reply

Your email address will not be published. Required fields are marked *