ನಮ್ಮ ಸಿಂಧನೂರು, ಎಪ್ರಿಲ್ 23
ಕಳೆದ ಹಲವು ದಿನಗಳಿಂದ ಜೆಡಿಎಸ್‌ನ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರೊಂದಿಗೆ ಕೊಪ್ಪಳ ಕ್ಷೇತ್ರಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಸಹೋದರ ಬಸವರಾಜ ನಾಡಗೌಡ ಅವರು ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕೆ.ಕರಿಯಪ್ಪ ಅವರ ಸಹೋದರ ರಾಜಶೇಖರ ಅವರೊಂದಿಗೆ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮಂಗಳವಾರ ನಗರದಲ್ಲಿ ಮನೆ ಮನೆ ಪ್ರಚಾರ ನಡೆಸಿದರು. ನಗರದ ವಾರ್ಡ್ ನಂ.12 ಮತ್ತು 13ರಲ್ಲಿ ಮತದಾರರ ಮನೆ ಮನೆಗೆ ತೆರಳಿದ ಮೈತ್ರಿ ಮುಖಂಡರು ಅಭ್ಯರ್ಥಿ ಬಸವರಾಜ ಕ್ಯಾವಟರ್ ಪರ ಮತಯಾಚನೆ ಮಾಡಿದರು. ಅವರೊಂದಿಗೆ ಮುಖಂಡರಾದ ರಾಜೇಶ್ ಹಿರೇಮಠ, ಸಿದ್ರಾಮೇಶ ಮನ್ನಾಪುರ, ಮಧ್ವರಾಜ್ ಆಚಾರ್,ಶಿವಬಸನಗೌಡ ಹಾಗೂ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಇನ್ನಿತರರಿದ್ದರು.