ಸಿಂಧನೂರು: ಜ.1ರಂದು ಜೈ ಬೀಮ್ ರೆಜಿಮೆಂಟ್ ಪಥ ಸಂಚಲನ: ಎಂ.ಗಂಗಾಧರ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 28

ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವದ ನಿಮಿತ್ತ, ಭೀಮಾ ಕೊರೆಗಾಂವ್ ಯುದ್ಧ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ 01-01-2026ರಂದು ನಗರದ ತಾಲೂಕು ಪಂಚಾಯಿತಿಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ, ಪಿಡಬ್ಲ್ಯುಡಿ ಕ್ಯಾಂಪ್‌ನ ಅಂಬೇಡ್ಕರ್ ವೃತ್ತದವರೆಗೆ ಜೈಬೀಮ್ ರೆಜಿಮೆಂಟ್ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಗಂಗಾಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಮನುವಾದಿ ಫ್ಯಾಸಿಸಂ ಸೋಲಿಸೋಣ, ಬ್ರಾಹ್ಮಣ್ಯವಾದ, ಬಂಡವಾಳವಾದ ಮುಕ್ತ, ಪ್ರಬುದ್ಧ ಭಾರತ ಕಟ್ಟೋಣ ಎಂಬ ಘೋಷ ವಾಕ್ಯದಡಿ ಅಂದು ಬೆಳಿಗ್ಗೆ 11 ಗಂಟೆಗೆ ತಾ.ಪಂ. ಆವರಣದಿಂದ ಪಥಸಂಚಲನ ಆರಂಭವಾಗಲಿದೆ, ಮಧ್ಯಾಹ್ನ 2 ಗಂಟೆಗೆ ಪಿಡಬ್ಲ್ಯುಡಿ ಕ್ಯಾಂಪ್‌ನ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ” ಎಂದು ಅವರು ತಿಳಿಸಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *