ಸಿಂಧನೂರು: ಮಾರ್ಚ್ 7ರಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದಿಂದ ನೀರಾವರಿ ಸಮಾವೇಶ: ಕೆ.ನಾಗಲಿಂಗಸ್ವಾಮಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು.ಮಾರ್ಚ್ 5

ತುಂಗಭದ್ರಾ ನೀರಾವರಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ, ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಮಾರ್ಚ್ 7ರಂದು ಬೆಳಿಗ್ಗೆ 10.30 ಗಂಟೆಗೆ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ರಿ) (ಎಐಸಿಸಿಟಿಯು) ಕೇಂದ್ರ ಸಮಿತಿ ಮುನಿರಾಬಾದ್‌ನ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ತುಂಗಭದ್ರಾ ಡ್ಯಾಂ ನೀರಾವರಿ ಯೋಜನೆ ರಾಜ್ಯದ ಬಹುದೊಡ್ಡ ನೀರಾವರಿ ಅಚ್ಚುಕಟ್ಟು ಪ್ರದೇಶವನ್ನೊಳಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ಈ ಯೋಜನೆಯಿಂದ ಲಕ್ಷಾಂತರ ಎಕರೆ ಪ್ರದೇಶ ನೀರಾವರಿಗೊಳಪಟ್ಟಿದೆ. ಕಳೆದ 25-30 ವರ್ಷಗಳಿಂದ ಅತ್ಯಂತ ಕಡಿಮೆ ಕೂಲಿಯಿಂದ ಕೆಲಸ ಮಾಡುತ್ತಾ ಬಂದಿರುವ ಗ್ಯಾಂಗ್‌ಮನ್, ಗೇಜ್ ರೀಡರ್, ವರ್ಕಿಂಗ್ ಇನ್ಸಪೆಕ್ಟರ್, ವಾಚ್‌ಮನ್, ಸವಡಿ, ಕಂಪ್ಯೂಟರ್ ಆಪರೇಟರ್, ಹೌಸ್‌ಕೀಪಿಂಗ್ ಸೇರಿದಂತೆ ಇತರೆ ಹುದ್ದೆಗಳಲ್ಲಿ ಕಾರ್ಮಿಕರು ಹಗಲು ರಾತ್ರಿ ಎನ್ನದೆ, ಕಲ್ಲು ಮುಳ್ಳು ಹಾವು ಚೇಳುಗಳನ್ನು ಲೆಕ್ಕಿಸದೇ, ತಮ್ಮ ಜೀವದ ಹಂಗನ್ನೂ ತೊರೆದು ರೈತರ ಜಮೀನುಗಳಿಗೆ ನೀರು ಹರಿಸುವ ಮಹತ್ವದ ಕೆಲಸವನ್ನು ಮಾಡುತ್ತಿದ್ದಾರೆ. ಇಷ್ಟೆಲ್ಲಾ ಶ್ರಮವಹಿಸುತ್ತಿದ್ದರೂ ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಇಲ್ಲದಂತಾಗಿದೆ. ಹಾಗಾಗಿ ಈ ಕುರಿತು ಚುನಾಯಿತ ಜನಪ್ರತಿನಿಧಿಗಳು ಹಾಗೂ ಸರ್ಕಾರವನ್ನು ಸಮಾವೇಶದ ಮೂಲಕ ಗಮನ ಸೆಳೆಯಲಾಗುತ್ತಿದೆ ಎಂದು ಹೇಳಿದರು.

Namma Sindhanuru Click For Breaking & Local News

ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ, ಗುತ್ತಿಗೆ ಪದ್ಧತಿಯನ್ನು ರದ್ಧಗೊಳಿಸಿ, ತುಂಗಭದ್ರಾ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು, ತುಂಗಭದ್ರಾ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ನೀರಾವರಿ ಕಾರ್ಮಿಕರಿಗೆ ಬದುಕುವ ವೇತನ, ಇಪಿಎಫ್ ಮತ್ತು ಇಎಸ್‌ಐ ಅನ್ನು ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಪಾವತಿಸಬೇಕು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಕಾರ್ಮಿಕರಿಗೆ ಕೆಲಸದ ಪರಿಕರ, ಗುರುತಿನ ಚೀಟಿ, ಸಮವಸ್ತç ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಬೇಕು., ನೀರಾವರಿ ಕಾರ್ಮಿಕರ ಬಾಕಿ ವೇತನ, ಪಿಎಫ್ ಮತ್ತು ಇಎಸ್‌ಐ ಕೂಡಲೇ ಪಾವತಿಸಬೇಕು ಎಂದು ಸಮಾವೇಶದಲ್ಲಿ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಜೀಜ್ ಜಾಗೀರದಾರ, ಸಿಂಧನೂರು ವಿಭಾಗದ ಅಧ್ಯಕ್ಷ ವಾದಿರಾಜ್ ಕುಲಕರ್ಣಿ, ವೀರೇಶ್ ಸುಲ್ತಾನಪುರ, ಶರಣಪ್ಪ ಉದ್ಬಾಳ, ಮೊಹಮ್ಮದ್ ಸಾಬ್, ಸಬಾಸ್ಟೀನ್, ದೇವೇಂದ್ರ, ವೆಂಕಟೇಶ ತಿಮ್ಮಾಪುರ, ಹುಸೇನ್‌ಸಾಬ್ ಸೇರಿದಂತೆ ಇತರರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *