ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 4
ರಾಯಚೂರು ನಗರದಲ್ಲಿ ಡಿಸೆಂಬರ್ 14 ಮತ್ತು 15 ರಂದು ಎರಡು ದಿನಗಳ ಕಾಲ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ರಾಜ್ಯಮಟ್ಟದ ದಲಿತಪರ ಲೇಖಕರು, ಪ್ರಗತಿಪರ ಚಿಂತಕರು ಮತ್ತು ಸ್ವಾಭಿಮಾನಿ ಹೋರಾಟಗಾರರು ಹಾಗೂ ನಾಡಿನ ಹೆಸರಾಂತ ಸಾಂಸ್ಕೃತಿಕ ವಿಮರ್ಶಕರಿಂದ ಬರಹಗಳನ್ನು ಆಹ್ವಾನಿಸಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಸಮ್ಮೇಳನದ ಸಂಯೋಜಕರಾದ ತಾಯರಾಜ್ ಮರ್ಚಟ್ಹಾಳ, ಸಂಪಾದಕರಾದ ಆರ್.ಕೆ.ಈರಣ್ಣ, ರಾಮಣ್ಣ ಹಿರೇಭೇರಿಗಿ ಅವರು ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬರಹಗಾರರು ತಮ್ಮ ಒಂದು ಲೇಖನ ಅಥವಾ ಕವನ ಮತ್ತು ಇತರೆ ಸೃಜನಶೀಲ ಬರಹಗಳನ್ನು ಮತ್ತು ಇತ್ತೀಚಿನ ಭಾವಚಿತ್ರವನ್ನು ಈ ಕೆಳಗೆ ತಿಳಿಸಿದ ವಿಳಾಸಕ್ಕೆ ತಲುಪಿಸಬಹುದು. ತಾವು ಕಳುಹಿಸುವ ಬರಹಗಳು ದಲಿತ ಸಾಹಿತ್ಯ, ಸಂಸ್ಕೃತಿ, ಚಳವಳಿ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರಗಳ ಬಗ್ಗೆಯೂ ವಿಷಯ ವಸ್ತುವಿರುವ ಕಥಾವಸ್ತು ಹಾಗೂ ಆಶಯವನ್ನು ಒಳಗೊಂಡಿರಬೇಕು. ಅಲ್ಲದೇ ವಿಮರ್ಶಕರಿಂದ ವಿಮರ್ಶೆ ಬರಹಗಳನ್ನೂ ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆಗಳು
1) ತಾವು ಕಳುಹಿಸುವ ಬರಹಗಳ ಜೊತೆಗೆ ಪ್ರಕಟಿಸುವ ಒಪ್ಪಿಗೆಯ ಪತ್ರವನ್ನು ನೀಡಬೇಕು.
2) ತಾವು ಕಳುಹಿಸಿದ ಬರಹ ಪ್ರಕಟಿಸಲು ಅಂತಿಮವಾಗಿ ಸಂಪಾದಕ ಮಂಡಳಿಗೆ ಬಿಟ್ಟಿರುತ್ತದೆ.
3) ಬರಹವು ನುಡಿ 01 ಈ ತಂತ್ರಾಂಶದಲ್ಲಿ ಮುದ್ರಿಸಿದ ಬರಹದ ಜೊತೆಗೆ ತಮ್ಮ ಒಂದು ಇತ್ತೀಚಿನ ಭಾವಚಿತ್ರವನ್ನು ಕಳಿಸಬೇಕು.ಈ ಕೆಳಗಿನ ವಾಟ್ಸಾಪ್ ನಂಬರ್‌ಗಳಿಗಾಗಲಿ, ಇ-ಮೇಲ್‌ಗಾಗಲಿ ಹಾಗೂ ಅಥವಾ ವಿಳಾಸಕ್ಕೆ ತಲುಪಿಸಲು ಕೋರಲಾಗಿದೆ. ಸ್ಮರಣ ಸಂಚಿಕೆ ಮೂಲಕ ಸಮ್ಮೇಳನಕ್ಕೆ ಶುಭಕೋರುವವರು ಹಾಗೂ ವಿವಿಧ ಇಲಾಖೆಗಳು ತಮ್ಮ ಯೋಜನೆಗಳ, ಸಂಸ್ಥೆಗಳ ಪ್ರಚಾರಕ್ಕಾಗಿ ಮತ್ತು ವೈಯಕ್ತಿಕವಾಗಿ ಜಾಹೀರಾತುಗಳನ್ನು ಕಳುಹಿಸಿಕೊಡಬಹುದು. ಮಾಹಿತಿಯನ್ನು ಕಳುಹಿಸಿಕೊಡಲು ನವೆಂಬರ್ 20 ಕೊನೆಯ ದಿನವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಜಾಹೀರಾತಿನ ದರದ ಮಾಹಿತಿ
ಹಿಂಬದಿ ರಕ್ಷಾಪುಟ (ಬಹುವರ್ಣದಲ್ಲಿ) – 1,00,000
ಎರಡನೇ ಪುಟ (ಬಹುವರ್ಣದಲ್ಲಿ) – 50,000
ಮೂರನೇ ರಕ್ಷಾಪುಟ (ಬಹುವರ್ಣದಲ್ಲಿ) – 50,000
ಒಳಪಟ (ಸಿಂಗಲ್ ಕಲರ್) – 25,000
ಅರ್ಧಪುಟ (ಸಿಂಗಲ್ ಕಲರ್) -15, 000
ಒಂದು ಪುಟ ಕಪ್ಪುಬಿಳುಪು – 10,000
ಅರ್ಧಪುಟ ಕಪ್ಪು ಬಿಳುಪು – 5,000
ಹೆಚ್ಚಿನ ಮಾಹಿತಿಗಾಗಿ
1) ಆರ್.ಕೆ.ಈರಣ್ಣ, ಅಧ್ಯಕ್ಷರು ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮಾನವಿ. ಮೊ: 99724 37930, rahi.8828@gmail.com3
2) ರಾಮಣ್ಣ ಹಿರೇಭೇರಿಗಿ, ಪ್ರಧಾನ ಕಾರ್ಯದರ್ಶಿ, ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಸಿಂಧನೂರು. ಮೊ: 95917 52436, erannark057@gmail.com
3) ಡಾ.ಮಲ್ಲಿಕಾರ್ಜುನ ಕುರುಬದೊಡ್ಡಿ, ಕಾರ್ಯದರ್ಶಿಗಳು, ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ರಾಯಚೂರು. ಮೊ: 9743231796
4) ಡಾ.ಬಸವರಾಜ ಸುಂಕೇಶ್ವರ, ಪ್ರಧಾನ ಕಾರ್ಯದರ್ಶಿ, ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮಾನವಿ. ಮೊ: 99450 87479, basavarajsunkrshwar@gmail.com
5) ಡಾ.ಶರೀಫ್ ಹಸಮಕಲ್, ಸಾಹಿತ್ಯಿಕ ಸಲಹೆಗಾರರು, ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಸಿಂಧನೂರು. ಮೊ: 94806 05552
6) ಡಾ.ರವಿಕುಮಾರ ಅಸ್ಕಿಹಾಳ, ಸಾಹಿತ್ಯಿಕ ಸಲಹೆಗಾರರು, ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ರಾಯಚೂರು. ಮೊ: 9535824919
7) ಹನುಮಂತಪ್ಪ ಚಿಕ್ಕಕಡಬೂರು, ಪ್ರಧಾನ ಕಾರ್ಯದರ್ಶಿ, ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮಸ್ಕಿ. ಮೊ: 99008 35058
8) ಬಸವರಾಜ ಚಿಗರಿ, ಉಪಾಧ್ಯಕ್ಷರು, ದಲಿತ ಸಾಹಿತ್ಯ ಪರಿಷತ್ತು ತಾಲೂಕ ಯುವಘಟಕ ಸಿಂಧನೂರು. ಮೊ: 90080 97881
ಇವರನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.