ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 06
ನಗರದ ಎಪಿಎಂಸಿಯ ಸಮುದಾಯ ಭವನ(ರೈತ ಭವನ)ದಲ್ಲಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ವತಿಯಿಂದ ಮಾರ್ಚ್ 8ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಮುಖಂಡರಾದ ರುಕ್ಮಿಣಿ ಗೆಜ್ಜಲಗಟ್ಟಾ ತಿಳಿಸಿದ್ದಾರೆ. ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆಯ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಎಂ.ಸೆಲ್ವಿ ತಮಿಳುನಾಡು ಭಾಗವಹಿಸಿ ಮಾತನಾಡಲಿದ್ದಾರೆ. ಎಂಎAಎಸ್ ಸಂಘಟನೆಯ ರಾಜ್ಯ ಅಧ್ಯಕ್ಷೆ ವಿಜಯರಾಣಿ, ಗ್ರಾಕೂಸ ಸಂಘಟನೆಯ ವಿರುಪಮ್ಮ, ವಸತಿ ನಿಲಯ ಕಾರ್ಮಿಕ ಸಂಘದ ದೇವಮ್ಮ, ನಸ್ರೀನಾ, ತುಳಸಮ್ಮ, ಹಂಪಮ್ಮ, ಹುಲಿಗೆಮ್ಮ, ಉದ್ಯೋಗ ಖಾತ್ರಿ ಸಂಘದ ಗದ್ದೆಮ್ಮ ಸೇರಿದಂತೆ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಿಂದ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ಕಾರಣ ಜಿಲ್ಲೆಯ ವಿವಿಧ ಮಹಿಳಾ ಸಂಘಟನೆಯಡಿಯಲ್ಲಿರುವ ಮತ್ತು ರೈತ, ಕೂಲಿ, ಕಾರ್ಮಿಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ದಿನಾಚರಣೆಗೆ ಭಾಗವಹಿಸಲು ಅವರು ಮನವಿ ಮಾಡಿದ್ದಾರೆ.