ನಮ್ಮ ಸಿಂಧನೂರು, ಜೂನ್ 2
ನದಿ ಉಗಮ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 02-06-2024ರಂದು 411 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಸದ್ಯ 3.36 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನದಲ್ಲಿ 807 ಕ್ಯೂಸೆಕ್ ನೀರು ಡ್ಯಾಂಗೆ ಹರಿದುಬಂದಿತ್ತು. ಬರಗಾಲದಿಂದ ತತ್ತರಿಸಿರುವ ಜನರು ಮಳೆ ಹಾಗೂ ಜಲಾಶಯದ ಒಳಹರಿವಿನ ಬಗ್ಗೆ ದಿನವೂ ಕುತೂಹಲದಿಂದ ನೋಡುವಂತಾಗಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕುಡಿವ ನೀರಿನ ತತ್ವಾರ ಎದುರಾಗಿದ್ದು, ನಗರ, ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಕುಡಿವ ನೀರಿನ ಕೆರೆಗಳು ದಿನದಿಂದ ದಿನಕ್ಕೆ ತಳಪಾಯ ಹಂತಕ್ಕೆ ತಲುಪುತ್ತಿವೆ. ಇನ್ನೂ ಒಂದು ವಾರ ಇಲ್ಲವೇ ಎರಡು ವಾರಗಳ ಹಂತದಲ್ಲಿ ದೊಡ್ಡ ಮಳೆಯಾಗಿ ಜಲಾಶಯ ಸೇರಿದಂತೆ ಹಳ್ಳ-ಕೊಳ್ಳಗಳಿಗೆ ನೀರು ಹರಿದುಬಂದರೆ ನಿಟ್ಟುಸಿರು ಬಿಡಬಹುದೇನೋ ಎನ್ನುವ ಪರಿಸ್ಥಿತಿ ಇದೆ.