ಸಿಂಧನೂರು: ಹೊಸಳ್ಳಿಕ್ಯಾಂಪ್.ಇ.ಜೆ ಬಾಲಕ ನಾಪತ್ತೆ, ಪತ್ತೆಗೆ ಮನವಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 21

ತಾಲೂಕಿನ ಹೊಸಳ್ಳಿಕ್ಯಾಂಪ್.ಇ.ಜೆಯ ಬಾಲಕ ಪರಶುರಾಮ ತಂದೆ ಹುಸೇನಪ್ಪ (12) ಭಾನುವಾರ ಸಂಜೆ ನಾಪತ್ತೆಯಾಗಿದ್ದಾನೆ ಎಂದು ಪಾಲಕರು ತಿಳಿಸಿದ್ದಾರೆ. ಕ್ಯಾಂಪ್‌ನ ರಾಮದೇವರ ಗುಡಿಯ ಬಳಿ ಭಾನುವಾರ ಸಂಜೆ 6 ಗಂಟೆಯವರೆಗೂ ಸ್ನೇಹಿತರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಬಾಲಕ ಆ ನಂತರ ನಾಪತ್ತೆಯಾಗಿದ್ದಾನೆ. ರಾತ್ರಿಯಾದರೂ ಮನೆಗೆ ಮಗ ವಾಪಸ್ ಬರದೇ ಇದ್ದರಿಂದ ಆತಂಕಗೊAಡ ನಾವು ಕ್ಯಾಂಪ್ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಡಿದೆವು. ಸಂಬಂಧಿಕರ ಬಳಿಯೂ ಕೇಳಿದೆವು ಎಲ್ಲಿಯೂ ಕಾಣಸಿಗಲಿಲ್ಲ, ಮಗನ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಹಾಗಾಗಿ ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ ಎಂದು ಪಾಲಕರು ತಿಳಿಸಿದ್ದಾರೆ. ಬಾಲಕ ತಮಗೆ ಎಲ್ಲಿಯಾದರೂ ಕಂಡುಬಂದಲ್ಲಿ ಪಾಲಕರು ಇಲ್ಲವೇ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ಹುಸೇನಪ್ಪ ಮೊ: 9880422792, ಶರಣಬಸವ ಮೊ: 6361440519, ಸಿದ್ದಣ್ಣ ಹೊಸಳ್ಳಿ ಇ.ಜೆ ಮೊ: 9632252201 ಹಾಗೂ 9739801600 ಈ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿ ತಿಳಿಸಲು ಮನವಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *