ಸಿಂಧನೂರು: ನಗರದ ವಿವಿಧೆಡೆ ಬೃಹತ್ ಹೋರ್ಡಿಂಗ್ ಅಳವಡಿಕೆ

Spread the love

ನಮ್ಮ ಸಿಂಧನೂರು, ಮಾರ್ಚ್ 7
ನಗರದ ಬಸವೇಶ್ವರ ಸರ್ಕಲ್, ಗಾಂಧಿ ಸರ್ಕಲ್ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ರಸ್ತೆ ವಿಭಜಕಗಳಲ್ಲಿ ಜಾಹಿರಾತಿನ ಬೃಹತ್ ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ, ಬೃಹತ್ ವಾಣಿಜ್ಯ ನಗರಿಗಳಲ್ಲಿ ಕಾಣಸಿಗುವ ಹೋರ್ಡಿಂಗ್‌ಗಳು ಈಗ ನಗರಕ್ಕೂ ಕಾಲಿಟ್ಟಿವೆ. ಯಾವುದೇ ಜಾಹಿರಾತು ಫಲಕ, ಬ್ಯಾನರ್ ಸೇರಿದಂತೆ ಪ್ರಚಾರ ಕಾರ್ಯ ಕೈಗೊಳ್ಳಲು ನಗರಸಭೆಗೆ ತೆರಿಗೆ ಪಾವತಿಸಬೇಕಿದೆ. ಸಿಂಧನೂರು ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವುದರಿಂದ ಪ್ರಚಾರಕಾರ್ಯ ವ್ಯಾಪಕವಾಗಿದೆ. ಬ್ಯಾನರ್, ಬಂಟಿಗ್ಸ್ ಸೇರಿದಂತೆ ಇನ್ನಿತರೆ ಪ್ಲೆಕ್ಸ್ಗಳ ಮೂಲಕ ಚುರುಕು ಪಡೆದಿದೆ. ಈ ನಿಟ್ಟಿನಲ್ಲಿ ನಗರಸಭೆ ಹೋರ್ಡಿಂಗ್‌ಗಳನ್ನು ಅಳವಡಿಸುವ ಮೂಲಕ ಖಾಸಗಿಯವರಿಗೆ ಜಾಹಿರಾತು ಫಲಕ ಅಳವಡಿಸಲು ಒದಗಿಸಿ, ತೆರಿಗೆ ವಿಧಿಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಹೋರ್ಡಿಂಗ್‌ಗಳನ್ನು ರಸ್ತೆ ವಿಭಜಕಗಳ ಮಧ್ಯೆ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೋರ್ಡಿಂಗ್‌ಗಳಲ್ಲಿ ಜಾಹಿರಾತು ಫಲಕ ಅಳವಡಿಸಲು ದರ ಇನ್ನಷ್ಟೇ ನಿಗದಿಪಡಿಸಬೇಕಿದೆ. ಕಳೆದ ಎರಡ್ಮೂರು ದಿನಗಳಿಂದ ದಿಢೀರ್ ಪ್ರತ್ಯಕ್ಷವಾದ ಹೋರ್ಡಿಂಗ್‌ಗಳನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಿರುವುದಂತೂ ಸತ್ಯ.


Spread the love

Leave a Reply

Your email address will not be published. Required fields are marked *