ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 20
ನಗರದ ಕುಷ್ಟಗಿ ಮಾರ್ಗದ ರಸ್ತೆಯಿಂದ ಕವಲೊಡೆಯುವ 7 ಕಿ.ಮೀ ಅಂತರದ ಹಟ್ಟಿವಿರುಪಾಪುರ ರಸ್ತೆ ಕೆಲ ರಿಯಲ್ ಎಸ್ಟೇಟ್ ಉದ್ಯಮದವರ ಉಪಟಳಕ್ಕೆ ತೋಪೆದ್ದು ಹೋಗಿದ್ದು, ಈ ಮಾರ್ಗದಲ್ಲಿ ಸಂಚರಿಸಲು ಸವಾರರು ಜೀವಭಯ ಎದುರಿಸುತ್ತಿದ್ದಾರೆ. ಗಂಗಾನಗರಕ್ಕೆ ಹೊಂದಿಕೊಂಡಂತಿರುವ ಹಟ್ಟಿವಿರುಪಾಪುರ ರಸ್ತೆಯ ಎಡ-ಬಲ ಬದಿಗಳಲ್ಲಿ ಸರಣಿಯೋಪಾದಿಯಲ್ಲಿ ರಿಯಲ್ ಎಸ್ಟೇಟ್ ಲೇಔಟ್‌ಗಳು ಎದ್ದಿದ್ದು, ಟಿಪ್ಪರ್‌ಗಳ ಮೂಲಕ ದಿನಂಪ್ರತಿ ಮರಂ, ಮರಳು, ಕಂಕರ್ ಸೇರಿದಂತೆ ಅವಶ್ಯಕ ಸಲಕರಣೆಗಳನ್ನು ಮನಸೋಇಚ್ಛೆ ಸಾಗಿಸುತ್ತಿರುವುದರಿಂದ
ರಸ್ತೆಗೆ ರಸ್ತೆಯೇ ಗುಂಡಿಮಯವಾಗಿದೆ !
“ಸಾರಿಗೆ ನಿಯಮಗಳನ್ನು ಮೀರಿ ಟಿಪ್ಪರ್‌ಗಳಲ್ಲಿ ಅತಿಭಾರದ ವಸ್ತುಗಳನ್ನು ಲೇಔಟ್‌ಗಳಿಗೆ ಸಾಗಿಸಲಾಗುತ್ತಿದೆ. ಚಿಕ್ಕ ರಸ್ತೆಯಲ್ಲಿ ಬೆಳಿಗ್ಗೆಯಿಂದಲೇ ಟಿಪ್ಪರ್‌ಗಳು ಓಡಾಡುತ್ತವೆ. ಎದುರು-ಬದುರು ಗಾಡಿ ಬಂದರೆ ಸೈಡು ತೆಗೆದುಕೊಳ್ಳಲು ಜಾಗ ಇಲ್ಲ. ಟಿಪ್ಪರ್‌ಗಳ ಓಡಾಟದಿಂದ ರಸ್ತೆ ಅಧ್ವಾನ ಸ್ಥಿತಿಗೆ ತಲುಪಿದ್ದು, ಹೊಲಗಳಿಗೆ ಬಂಡಿ ಇಲ್ಲವೇ ಟ್ರಾö್ಯಕ್ಟರ್‌ಗಳನ್ನು ತೆಗೆದುಕೊಂಡು ಹೋಗಲು ಅಡಚಣೆಯಾಗಿದೆ” ಎಂದು ರೈತರೊಬ್ಬರು ಆರೋಪಿಸುತ್ತಾರೆ.
ಕೊಚ್ಚಿಹೋದ ರಸ್ತೆ
“ಟಿಪ್ಪರ್ ಓಡಾಟದಿಂದಾಗಿ ಕೆಲವೊಂದು ಕಡೆ ರಸ್ತೆಗೆ ಗುಂಡಿ ಬಿದ್ದು, ಮಳೆ ನೀರಿಗೆ ಕೊಚ್ಚಿಹೋಗಿದೆ. ಇನ್ನೂ ಕೆಲವು ಕಡೆ ಡಾಂಬರ್ ಕಿತ್ತಿ, ಕಂಕರ್‌ಗಳು ತೇಲಿವೆ. ಅಲ್ಲಲ್ಲಿ ಸಣ್ಣ ಬ್ರಿಡ್ಜ್ಗಳಿಗೆ ಹಾನಿಯಾಗಿದೆ. ಕುಷ್ಟಗಿ ರಸ್ತೆಯ ವೇಬ್ರಿಡ್ಜ್ನಿಂದ ಹಾದುಹೋಗುವ ರಸ್ತೆಯ ಡಾಂಬರ್ ಸಂಪೂರ್ಣ ಕಿತ್ತುಹೋಗಿ ಮರಂ ತೇಲಿದ್ದು, ಧೂಳುಮಯಾಗಿದೆ. ಗಂಗಾನಗರ ಸೇರಿದಂತೆ ಸುತ್ತಮುತ್ತಲಿನ ವಾರ್ಡ್ ಜನರು ವಿಪರೀತ ಧೂಳಿನ ಸಮಸ್ಯೆಯಿಂದ ಮುಖಕ್ಕೆ ಕರವಸ್ತç ಕಟ್ಟಿಕೊಂಡು ವಾಹನ ಚಲಾಯಿಸುವಂತಾಗಿದೆ” ಎಂದು ನಿವಾಸಿಗಳು ಆಪಾದಿಸಿದ್ದಾರೆ.
ಅಪಘಾತ ಭಯ, ಸಾರ್ವಜನಿಕರ ಆಕ್ರೋಶ
“ಈ ಮಾರ್ಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮದವರ ಟಿಪ್ಪರ್‌ಗಳು ದಿನವೂ ಒಂದಿಲ್ಲೊಂದು ಸಾಮಗ್ರಿಗಳನ್ನು ಸಾಗಿಸುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು, ಆಟೊ, ಶಾಲಾ ವಾಹನ ಹಾಗೂ ಇನ್ನಿತರೆ ವಾಹನಗಳನ್ನು ಚಲಾಯಿಸಲು ಸಮಸ್ಯೆಯಾಗಿದ್ದು, ಅಪಘಾತ ಭೀತಿ ಎದುರಿಸುತ್ತಿದ್ದಾರೆ. ಬೆಳಿಗ್ಗೆ ಶಾಲಾ ವಾಹನ ಸಂಚರಿಸುವ ಸಮಯದಲ್ಲೇ ಕೆಲವೊಂದು ಬಾರಿ ಟಿಪ್ಪರ್‌ಗಳ ಓಡಾಟ ಇರುತ್ತದೆ. ಇಂತಹ ಸಂದರ್ಭದಲ್ಲಿ ಏನಾದರೂ ಆದರೆ ಯಾರೂ ಹೊಣೆ ಎಂದು ವಾರ್ಡ್ನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.