ಸಿಂಧನೂರು : ‘ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ನೀಡಿ’: ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ

Spread the love

ನಮ್ಮ ಸಿಂಧನೂರು, ಜೂನ್ 3
ಪಾಲಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ನೀಡಿ, ಸದ್ಗುಣಗಳ ವ್ಯಕ್ತಿಗಳನ್ನಾಗಿ ರೂಪಿಸಬೇಕು. ಒಳ್ಳೆಯ ಸಂಸ್ಕಾರ ಪಡೆದ ಮಕ್ಕಳು ಎಂದಿಗೂ ಮನೆಯ ಆಸ್ತಿ ಇದ್ದಂತೆ. ಅವರು ಪಾಲಕರಿಗೆ, ಮನೆತನಕ್ಕೆ ಗೌರವ ತರುತ್ತಾರೆ ಎಂದು ಮೂರುಮೈಲ್ ಕ್ಯಾಂಪ್‌ನ ಕರಿಬಸವನಗರದ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಅವರು ಭಾನುವಾರ ಮೂರುಮೈಲ್ ಕ್ಯಾಂಪ್‌ನ ಕರಿಬಸವನಗರದ ರಂಭಾಪುರಿ ಖಾಸಾಶಾಖಾ ಮಠದಲ್ಲಿ ಶ್ರೀಧರ ಸ್ವಾಮಿ ಹಿರೇಮಠ ಹಸಮಕಲ್ ಹಾಗೂ ರಂಭಾಪುರಿ ಖಾಸಾ ಶಾಖಾಮಠದ ಭಕ್ತವೃಂದ ಮತ್ತು ತಾಲೂಕು ಪುರೋಹಿತ ಬಳಗ ಹಮ್ಮಿಕೊಂಡಿದ್ದ ಅಕ್ಷರಭ್ಯಾಸ ಕಾರ್ಯಕ್ರಮವನ್ನು ʼಚಿಕ್ಕ ಮಕ್ಕಳಿಗೆ ಅಕ್ಷರ ಬರೆಸುವ ಮೂಲಕʼ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. ಮಕ್ಕಳಿಗೆ ಬದುಕಿನ ಶಿಕ್ಷಣದ ಜೊತೆ ಜೊತೆಗೆ, ಅಧ್ಯಾತ್ಮಿಕ, ಧಾರ್ಮಿಕ ಶಿಕ್ಷಣ ಕೊಡಿಸಬೇಕು. ಬದುಕಿನ ಶಿಕ್ಷಣ ಮಕ್ಕಳಿಗೆ ಕಾಯಕದ ಪ್ರಜ್ಞೆ ಮೂಡಿಸಿದರೆ, ಅಧ್ಯಾತ್ಮಿಕ ಮತ್ತು ಧಾರ್ಮಿಕ ಶಿಕ್ಷಣ ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತವೆ ಎಂದು ಹೇಳಿದರು.

Namma Sindhanuru Click For Breaking & Local News

ಕಾರ್ಯಕ್ರಮದ ಎಲ್ಲ ಉಸ್ತುವಾರಿ ವಹಿಸಿಕೊಂಡಿದ್ದ ಶ್ರೀಧರ ಹಿರೇಮಠ ಹಸಮಕಲ್ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ದಾಸೋಹ ಸೇವೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಸ್ವಾಮಿ ಹಿರೇಮಠ, ನೆನಪಿನ ಕಾಣಿಕೆ ಸೇವಾಕರ್ತರಾದ ನಿವೃತ್ತ ನಿರ್ವಾಹಕ ವೀರಭದ್ರಯ್ಯಸ್ವಾಮಿ ಹಿರೇಮಠ ಹಸಮಕಲ್ ಸೇರಿದಂತೆ ಇನ್ನಿತರ ವಹಿಸಿಕೊಂಡು ನೆರವೇರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲಿನಾಥಸ್ವಾಮಿ, ಅಮರಯ್ಯಸ್ವಾಮಿ ಅಲಬನೂರು, ವೀರೇಶ ಯಡಿಯೂರಮಠ, ಬಸವರಾಜ ಸ್ವಾಮಿ ಹಿರೇಮಠ, ಶರಣಯ್ಯಸ್ವಾಮಿ ಅರಳಹಳ್ಳಿ, ಶಿವಜಾತಯ್ಯಸ್ವಾಮಿ, ಬಸವಲಿಂಗಯ್ಯ ಹಿರೇಮಠ ಹಸಮಕಲ್, ಟ್ಯಾಲೆಂಟ್ ಪೂರ್ವ ಪ್ರಾಥಮಿಕ ಶಾಲೆಯ ಮಲ್ಲನಗೌಡ, ಚತುರ್ವೇದ ಬಳಗ, ಪುರೋಹಿತ ಬಳಗ, ಶ್ರೀಮಠದ ಭಕ್ತ ವೃಂದ ಇನ್ನಿತರರಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *