ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 23
ಸುರಿಯುವ ಮಳೆಯಲ್ಲೂ ಕೊಡೆ ಹಿಡಿದು ತಹಸಿಲ್ ಕಾರ್ಯಾಲಯದ ಮುಂದೆ ಏಕಾಂಗಿ ಹೋರಾಟ ! ಬಿಳಿಯಂಗಿ, ಬಿಳಿ ಟೊಪ್ಪಿಗೆ ವ್ಯಕ್ತಿಯನ್ನು ಕಂಡು ಹುಬ್ಬೇರಿಸಿದ ಸಾರ್ವಜನಿಕರು !! ನಗರದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸಾಮಾನ್ಯವಾಗಿತ್ತು, ಮಳೆ ನಡುವೆಯೂ ಟೆಂಟ್‌ನಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಹನುಮಂತ ಕಲ್‌ಶೆಟ್ಟಿ ತದನಂತರ ಮಳೆ ಜೋರಾಗುತ್ತಿದ್ದಂತೆ, ಟೆಂಟ್‌ನೊಳಗೆ ಕೊಡೆ ಏರಿಸಿ ಅಚ್ಚರಿ ಮೂಡಿಸಿದರು. !!
ಸಿಂಧನೂರು ನಗರಸಭೆಯಲ್ಲಿ ಎಸ್ಸಿ, ಎಸ್ಟಿ ಕಾಯ್ದೆ ಹಾಗೂ ಕರ್ನಾಟಕ ಮುನ್ಸಿಪಲ್ ಕಾಯ್ದೆ 1964ರ ನಿಯಮಗಳನ್ನು ಉಲ್ಲಂಘಿಸಿ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಈ ಕುರಿತು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕಲ್‌ಶೆಟ್ಟಿ ಅವರು ತಹಸೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ಏಕಾಂಗಿ ಧರಣಿ ಸತ್ಯಾಗ್ರಹ ನಡೆಸಿದರು.