ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 23
ಕರ್ನಾಟಕ ಮುಸ್ಲಿಂ ಸಂಘ(ಮುಸ್ಲಿಂ ಪರ ಸಂಘಟನೆಗಳ ಒಕ್ಕೂಟ)ದ ಸಿಂಧನೂರು ತಾಲೂಕು ಘಟಕದ ಅಧ್ಯಕ್ಷರಾಗಿ ಮಹಮ್ಮದ್ ಫಯಾಜ್ ಅಹಮದ್ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಎಲ್.ಎಸ್.ಬಶೀರ್ ಅಹ್ಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಸ್ಲಿಂ ಸಮಾಜದ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಅಭಿವೃದ್ಧಿಯಲ್ಲಿ ತೊಡಗಿಕೊಂಡು, ನಾಡು-ನುಡಿ, ಜಲ-ಗಡಿ ಹೋರಾಟಗಳಲ್ಲಿ ಕಾರ್ಯೋನ್ಮುಖರಾಗುವಂತೆ ಅವರು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ
ಕರ್ನಾಟಕ ಮುಸ್ಲಿಂ ಸಂಘದ ನೂತನ ಅಧ್ಯಕ್ಷರಾಗಿ ಮಹಮ್ಮದ್ ಫಯಾಜ್ ಅಹಮದ್ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು ಸೋಮವಾರ ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ಬಾಬಾ ಚುಕ್ಕಿ, ನಿಸಾರ್ಖಾನ್, ವಲಿ ಆರ್ಟ್ಸ್, ಸೋಹೈಲ್ ದೇಸಾಯಿ, ಅಮರೇಶ ಬಾಗೋಡಿ, ಪ್ರಶಾಂತಿ ಪಚ್ಚಿ, ಖದೀರ್, ರಜಿಯಾಬೇಗಂ, ಶಯನಾಜ್ಬೇಗಂ, ಫಯಾಜ್ ಪೀರಾ ಸೇರಿದಂತೆ ಇನ್ನಿತರರು ಇದ್ದರು.

