ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 05
ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ ಜಾರಿಗೆ ನಿರಂತರ ಹೋರಾಟ ನಡೆಸಿದ ಹೋರಾಟಗಾರರು ಹಾಗೂ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೈ.ಕ.ಭಾಗದ ಅಧಿಕಾರಿಗಳನ್ನು ನಗರದ ಪದವಿ ಮಹಾವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಯಾಣ ದಸರಾ ಚಾಲನಾ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಹೈದ್ರಾಬಾದ್ ಕರ್ನಾಟಕ ಹೋರಾಟಗಾರರಾದ ರಾಘವೇಂದ್ರ ಕುಷ್ಟಗಿ, ಸಿರಿಗೇರಿ ಪನ್ನರಾಜ್ ಬಳ್ಳಾರಿ, ರಜಾಕ್ ಉಸ್ತಾದ್ ಸೇರಿದಂತೆ ಇನ್ನಿತರೆ ಹೋರಾಟಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿ ಗೌರವಿಸಿದರು. ಕೆಎಸ್ಎಸ್ ಅಧಿಕಾರಿಗಳಾದ ನರಸಪ್ಪ, ಲಕ್ಷಿö್ಮದೇವಿ, ಮಾಳಿಂಗರಾಯ ಮತ್ತಿತರರನ್ನು ಸನ್ಮಾನಿಸಲಾಯಿತು. ವೇದಿಕೆ ಸಮಾರಂಭಕ್ಕೆ ಅಪಾರ ಜನಸ್ತೋಮ ನೆರೆದಿತ್ತು. ಸಿಂಧನೂರು ದಸರಾ ಮಹೋತ್ಸವವನ್ನು ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಉದ್ಘಾಟಿಸಿ, ಈ ಭಾಗದ ಜನರ ಸೌಹಾರ್ದತೆಯನ್ನು ಗುಣಗಾನ ಮಾಡಿದರು.