ಸಿಂಧನೂರು: ಸಮುದಾಯ ಸಾಂಸ್ಕೃತಿಕ ಸಂಘಟನೆಯಿಂದ ಆಗಸ್ಟ್‌ನಲ್ಲಿ ನಾಟಕೋತ್ಸವ

Spread the love

ನಮ್ಮ ಸಿಂಧನೂರು, ಜುಲೈ 16
ನಗರದ ಟೌನ್‌ಹಾಲ್‌ನಲ್ಲಿ ಆಗಸ್ಟ್ 24, 25 ಹಾಗೂ 26ರಂದು ಸಮುದಾಯ ಸಾಂಸ್ಕೃತಿಕ ಸಂಘಟನೆ ವತಿಯಿಂದ 3 ದಿನಗಳ ಕಾಲ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಶರಬಣ್ಣ ನಾಗಲಾಪುರ ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಟಕೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಪದಾಧಿಕಾರಿಗಳ ಹಾಗೂ ಹಿತೈಷಿಗಳ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದು, ನಾಟಕೋತ್ಸವದ ಅಂಗವಾಗಿ ಸ್ಮರಣ ಸಂಚಿಕೆಯನ್ನೂ ಹೊರತರಲಾಗುವುದು ಎಂದು ಅವರು ಹೇಳಿದ್ದಾರೆ.


Spread the love
ಟ್ಯಾಗ್‌ಗಳು:

Leave a Reply

Your email address will not be published. Required fields are marked *