ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 7
ಕೋಲಕಾರ ಫ್ಯಾಮಿಲಿ ಟ್ರಸ್ಟ್ ಜಾಲಹಳ್ಳಿ ಅವರು ಹೊರತಂದಿರುವ, ಡಾ.ಮಲ್ಲಿಕಾರ್ಜುನ ಕಮತಗಿ ರಚಿತ ಕೃತಿ ‘ಜವಾರಿ ಜರ್ನಿ’ ಲೋಕಾರ್ಪಣೆ ಕಾರ್ಯಕ್ರಮ ನಗರದ ಎಲ್ಬಿಕೆ & ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ: 11-01-2026ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅಧ್ಯಕ್ಷತೆಯನ್ನು ಪ್ರಕಾಶಕ ರಾಘವೇಂದ್ರ ಕೋಲಕಾರ ಜಾಲಹಳ್ಳಿ ವಹಿಸುವರು. ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್ ಕೊಪ್ಪಳದ ಅಧ್ಯಕ್ಷರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಅಜ್ಮೀರ ನಂದಾಪೂರ ಅವರು ಉದ್ಘಾಟಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿ.ಬಿ.ಚಿಲ್ಕರಾಗಿ ಉಪಸ್ಥಿತರಿರುವರು. ಲೇಖಕ ಡಾ.ಶರೀಫ್ ಹಸಮಕಲ್ ಕೃತಿಯ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಸಿಂಧನೂರು, ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ವೀರಭದ್ರಯ್ಯ ಜಿ.ಎಂ, ರಾಯಚೂರಿನ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎನ್.ಸತ್ಯನಾರಾಯಣ ಶ್ರೇಷ್ಠಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್. ಎಫ್. ಮಸ್ಕಿ, ಸುರಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸಪ್ಪ ಯಾಳವಾರ, ದಲಿತ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಡಾ. ಹುಸೇನಪ್ಪ ಅಮರಾಪುರ ಹಾಗೂ ಹೊಳೆಪ್ಪ ಕಮತಗಿ ಸುರಪುರ ಭಾಗವಹಿಸುವರು. ಡಾ.ಅರುಣಕುಮಾರ ಬೇರ್ಗಿ ಪ್ರಾಸ್ತಾವಿಕ, ನಿರೂಪಣೆ ಈಶ್ವರ ಹಲಗಿ, ಸ್ವಾಗತ ರಾಮಣ್ಣ ಹಿರೆಬೇರ್ಗಿ, ವಂದನಾರ್ಪಣೆ ಡಾ.ಬಸವರಾಜ ಚಿಗರಿ ನಿರ್ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
