ನಮ್ಮ ಸಿಂಧನೂರು, ನವೆಂಬರ್ 9
ಜವಳಗೇರಾ ನಾಡಗೌಡರ ಸರಕಾರಿ ಹೆಚ್ಚುವರಿ ಭೂಮಿ 1064 ಎಕರೆ ಭೂರಹಿತರಿಗೆ ಹಂಚಲು ಆಗ್ರಹಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್, ಕರ್ನಾಟಕ ರೈತ ಸಂಘ (ಎಐಕೆಕೆಎಸ್) ತಾಲೂಕು ಸಮಿತಿ ವತಿಯಿಂದ ನವೆಂಬರ್ 11ರಂದು ಸಿಂಧನೂರು ತಹಸೀಲ್ ಕಾರ್ಯಾಲಯದ ಮುಂದೆ ಮಹಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. “ಸಿಂಧನೂರು ಸಿಡಿದೆದ್ದ ಭೂ ಸಂಘರ್ಷ ಕಳೆದ 6 ತಿಂಗಳು ಹಗಲು ರಾತ್ರಿ ಸರಣಿ ಧರಣಿ ನಡೆಸುವ ಮೂಲಕ ಗಮನ ಸೆಳೆದಿದೆ. ಇದರಿಂದ ಎಚ್ಚೆತ್ತ ಆಡಳಿತ ಸಿಂಧನೂರು ಭೂ ನ್ಯಾಯ ಮಂಡಳಿ ರಚನೆಮಾಡಿದೆ. ಭೂ ನ್ಯಾಯ ಮಂಡಳಿ ಮುಂದೆ ನಮ್ಮ ಹಕ್ಕೊತ್ತಾಯಗಳನ್ನು ನ್ಯಾಯಯುತ ಬೇಡಿಕೆಗಳನ್ನು ಮಂಡಿಸಿ, ಅನ್ಯರ ಪಾಲಾಗಿರುವ ತಾಲೂಕಿನ ಸಾವಿರಾರು ಎಕರೆ ಹೆಚ್ಚುವರಿ ಭೂಮಿಯನ್ನು, ಭೂಹೀನರಿಗೆ ಹಂಚಬೇಕೆAದು ಆಗ್ರಹಿಸಿ ನವೆಂಬರ್ 11, 2024 ಸೋಮವಾರದಂದು ಸಿಂಧನೂರು ತಹಸೀಲ್ದಾರ್ ಕಛೇರಿ ಮುಂದೆ ಮಹಾ ಧರಣಿ ಹೋರಾಟ ನಡೆಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ” ಎಂದು ರಾಜ್ಯ ಸಮಿತಿ ಸದಸ್ಯ ಎಂ.ಗAಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.