ಸಿಂಧನೂರು: ಕೆಂಗಲ್, ಉಪ್ಪಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ

Spread the love

* ಹುಜನ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಕಾರ್ಯದರ್ಶಿ ಈರೇಶ ಒತ್ತಾಯ
* ಅಪ್ರಾಪ್ತ ಬಾಲಕರಲ್ಲಿ ಹೆಚ್ಚಿದ ಮದ್ಯ ವ್ಯಸನದ ಚಾಳಿ
, ದೂರಿನಲ್ಲಿ ಪ್ರಸ್ತಾಪ
* ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮನವಿ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 10

ತಾಲೂಕಿನ ಕೆಂಗಲ್, ಉಪ್ಪಳ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದು, ಕೆಲ ಕಿರಾಣಿ ಸ್ಟೋರ್, ಮನೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕಾನೂನು-ಸುವ್ಯವಸ್ಥೆಗೆ ಭಂಗ ಉಂಟಾಗಿದೆ ಆರೋಪಿಸಿ, ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಹುಜನ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಕಾರ್ಯದರ್ಶಿ ಈರೇಶ ಅವರು ಬುಧವಾರ ಅಬಕಾರಿ ಇಲಾಖೆ ಅಧಿಕಾರಿ ಗಂಗಾಧರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
‘ಅಪ್ರಾಪ್ತ ವಯಸ್ಸಿನವರಿಗೆ ಮದ್ಯದ ಗೀಳು’
ತಾಲೂಕಿನ ಕೆಂಗಲ್ ಹಾಗೂ ಉಪ್ಪಳ ಗ್ರಾಮಗಳಲ್ಲಿ ಕೆಲವರು ಓಣಿಯ ಕೆಲ ಮನೆಗಳಲ್ಲಿ ಹಾಗೂ ಕೆಲ ಕಿರಾಣಿ ಸ್ಟೋರ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಮದ್ಯ ವ್ಯಸನಕ್ಕೆ ಅಪ್ರಾಪ್ತ ಬಾಲಕರು ಬಲಿಯಾಗುತ್ತಿದ್ದು ಪಾಲಕರನ್ನು ಆತಂಕಕ್ಕೆ ಈಡು ಮಾಡಿರುತ್ತದೆ. ಇನ್ನೂ ಆಘಾತಕಾರಿ ಬೆಳವಣಿಗೆ ಏನೆಂದರೆ ಹದಿನೆಂಟು ವರ್ಷದ ಒಳಗಿನ ಶಾಲಾ-ಕಾಲೇಜಿನ ಯುವಕರು ಮದ್ಯ ವ್ಯಸನದ ಗೀಳಿಗೆ ಬಿದ್ದಿದ್ದಾರೆ. ಇದಕ್ಕೆ ಮೂಲ ಕಾರಣ ಗ್ರಾಮದಲ್ಲಿ ಅತಿ ಸುಲಭವಾಗಿ ಮದ್ಯ ದೊರೆಯುತ್ತಿರುವುದು. ಮದ್ಯ ಕುಡಿಯಲು ಕೆಲ ಹದಿ ವಯಸ್ಸಿನ ಯುವಕರು ಮನೆಯಲ್ಲಿ ಕಳ್ಳತನ ಇನ್ನಿತರೆ ಅಪರಾಧಿಕೃತ್ಯಗಳಿಗೆ ಮುಂದಾಗಿದ್ದು, ಮನೆಯ ಪಾಲಕರು ರೋಸಿ ಹೋಗಿದ್ದಾರೆ.
‘ದುಡಿದ ಹಣ ಕುಡಿತದ ಪಾಲು’
ಬಡವರು ದುಡಿದ ಹಣವನ್ನು ಕುಡಿತಕ್ಕೆ ಖರ್ಚು ಮಾಡುತ್ತಿದ್ದು, ದಿನವೂ ಮನೆಗಳಲ್ಲಿ ಕೌಟುಂಬಿಕ ಜಗಳಗಳು ಹೆಚ್ಚುತ್ತಿವೆ. ಮದ್ಯ ವ್ಯಸನಿಗಳ ಹಾವಳಿಯಿಂದ ಈ ಗ್ರಾಮಗಳಲ್ಲಿ ದಿನವೂ ಸಣ್ಣಪುಟ್ಟ ಜಗಳಗಳು ಸಾಮಾನ್ಯವಾಗಿದ್ದು, ಕಾನೂನು-ಸುವ್ಯವಸ್ಥೆ ಹದಗೆಟ್ಟು ಹೋಗಿರುತ್ತದೆ. ಮಹಿಳೆಯರು, ಯುವತಿಯರು ಮನೆಬಿಟ್ಟು ಶಾಲಾ-ಕಾಲೇಜು ಇಲ್ಲವೆ ಕೆಲಸ ಕಾರ್ಯಗಳಿಗೆ ಹೊರಗಡೆ ಹೋಗಲು ಹೆದರಿಕೆಪಡುವಂತಾಗಿದೆ. ಇನ್ನೂ ಕೆಲ ಮದ್ಯ ವ್ಯಸನಿ ಯುವಕರು, ಯುವತಿಯರಿಗೆ ಕುಡಿದು ವಿನಾಃಕಾರಣ ಕಿರುಕುಳ ನೀಡುತ್ತಿದ್ದಾರೆ. ಕೆಲವರು ಕುಡಿದು ವಯಸ್ಸಾದ ತಂದೆ-ತಾಯಿಗಳನ್ನು ಹೊಡೆಯುವುದು-ಬಡಿಯುವುದು ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ಹೆಂಡತಿ, ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಅಕ್ರಮ ಮದ್ಯದ ಹಾವಳಿಯಿಂದಾಗಿ ಈ ಗ್ರಾಮಗಳಲ್ಲಿ ಅಶಾಂತಿ ವಾತಾವರಣ ಉಂಟಾಗಿದೆ ಎಂದು ಮನವಿಯಲ್ಲಿ ಈರೇಶ ಅವರು ವಿವರಿಸಿದ್ದಾರೆ.
ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಒತ್ತಾಯ
ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟಾಗಿದ್ದು, ಹಾಗಾಗಿ ಗ್ರಾಮದಲ್ಲಿ ರಾಜಾರೋಷವಾಗಿ ಅಕ್ರಮಮದ್ಯ ಮಾರಾಟ ಮಾಡುತ್ತಿರುವವರನ್ನು ಗುರುತಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು, ವಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಸಂಘಟನೆಯಿAದ ಅಬಕಾರಿ ಇಲಾಖೆಯ ಮುಂದೆ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಮಾರ್ಗ) ತಾಲೂಕು ಅಧ್ಯಕ್ಷ ಬಸವರಾಜ ತುರ್ವಿಹಾಳ ಇದ್ದರು.


Spread the love

Leave a Reply

Your email address will not be published. Required fields are marked *