ನಮ್ಮ ಸಿಂಧನೂರು, ಮೇ 30
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ದದ್ದಲ್ ಬಸನಗೌಡ ಹಾಗೂ ಅವರೇ ನೇರ ಕಾರಣ ಎಂದು ಆರೋಪಿಸಿ, ಕೂಡಲೇ ಜವಾಬ್ದಾರಿಯುತ ಸ್ಥಾನದಿಂದ ಇವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ತಾಲೂಕು ಸಮಿತಿ ತಹಸೀಲ್ ಕಾರ್ಯಾಲಯದ ಅಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಮನವಿಪತ್ರ ರವಾನಿಸಿತು.
ಮೃತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ಗಂಗಣ್ಣ ಡಿಶ್, ಜಿಲ್ಲಾ ಸಂಚಾಲಕ ರಾಮಕೃಷ್ಣ ಭಜಂತ್ರಿ, ಉಪಾಧ್ಯಕ್ಷ ಲಕ್ಷö್ಮಣ ಭೋವಿ, ತಾಲೂಕು ಉಪಾಧ್ಯಕ್ಷ ರಾಜಾಸಾಬ್, ಬಸವರಾಜ ಟೇಲರ್, ಶರಣಬಸವ, ಬಾಷಾಸಾಬ್, ರಮಜಾನ್ ಸಾಬ್, ಎಸ್.ಎಸ್.ಪಾಶಾ, ಪರಶುರಾಮ್, ಸಲ್ಮಾನ್ ಮೆಕ್ಯಾನಿಕ್, ಅಯ್ಯಪ್ಪ ಮೇಟಿ ಸೇರಿದಂತೆ ಇನ್ನಿತರರಿದ್ದರು.