ನಮ್ಮ ಸಿಂಧನೂರು, ಜನವರಿ 30
ಕುಷ್ಟಗಿ ಮಾರ್ಗದ ಡಿಗ್ರಿ ಕಾಲೇಜಿನ ಎಂಎಸ್ಸಿ ವಿಭಾಗದ ವಿದ್ಯಾರ್ಥಿನಿಯೊಬ್ಬರನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಮಾಡಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದ್ದು, ಇಡೀ ಸಿಂಧನೂರು ಬೆಚ್ಚಿಬಿದ್ದಿದ್ದು, ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೊಲೆಗೀಡಾದ ವಿದ್ಯಾರ್ಥಿನಿ ಶಿಫಾ ಲಿಂಗಸುಗೂರು ಪಟ್ಟಣದ ನಿವಾಸಿಯಾಗಿದ್ದು, ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎಂ.ಎಸ್ಸಿ ಪ್ರಥಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಂದಿನAತೆ ಬೆಳಿಗ್ಗೆ ಕಾಲೇಜಿಗೆ ಬಂದಿದ್ದಾಳೆ. ಕಾಲೇಜಿಗೆ ಬಂದಿದ್ದ ಈಕೆಯನ್ನು ಫಾಲೋ ಮಾಡಿದ ದುಷ್ಕರ್ಮಿ ಆಕೆಯನ್ನು ಪುಸಲಾಯಿಸಿ ಮಹಾವಿದ್ಯಾಲಯದ ಸಮೀಪದ ಬಳಿಯಿರುವ ಲೇಔಟ್ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆಂದು ಹೇಳಲಾಗುತ್ತಿದೆ. ತದನಂತರ ಚಾಕುವಿನಿಂದ ಕತ್ತಿಗೆ ಬಲವಾಗಿ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಪೈಶಾಚಿಕ ಕೃತ್ಯ ?
ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎಂ.ಎಸ್ಸಿ ಪ್ರಥಮ ಸೆಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಲಿಂಗಸುಗೂರಿನ ಶಿಫಾ ಹಾಗೂ ಕೊಲೆಗೈದ ದುಷ್ಕರ್ಮಿ ಯುವಕ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆಂದು ಹೇಳಲಾಗುತ್ತಿದೆ. ಇದಕ್ಕೆ ಯುವತಿಯ ಮನೆಯವರ ವಿರೋಧವಿತ್ತೆಂದು ಹೇಳಲಾಗುತ್ತಿದೆ. ಈ ನಡುವೆ ಯುವತಿಯೂ ಕೆಲ ದಿನಗಳಿಂದ ಸಂಪರ್ಕ ಕಡಿದುಕೊಂಡಿದ್ದಾಳೆAದು ಹೇಳಲಾಗುತ್ತಿದೆ. ಇದರಿಂದ ಕುಪಿತಗೊಂಡ ದುಷ್ಕರ್ಮಿ ಯುವಕ ಈಕೆ ಗುರುವಾರ ಕಾಲೇಜಿಗೆ ಹೋಗುವುದನ್ನು ಗಮನಿಸಿ, ನಿರಂತರ ಫಾಲೋ ಮಾಡಿಕೊಂಡು ಬಂದಿದ್ದಾನAತೆ. ಬೆಳಿಗ್ಗೆಯೇ ಡಿಗ್ರಿ ಕಾಲೇಜು ಬಳಿ ಬಂದು, ಪುಸಲಾಯಿಸಿ ಹೊಸ ಲೇಔಟ್ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಲಿಂಗಸುಗೂರು ಪೊಲೀಸ್ ಠಾಣೆಗೆ ದುಷ್ಕರ್ಮಿ ಸರಂಡರ್
ಸಿಂಧನೂರಿನ ಡಿಗ್ರಿ ಕಾಲೇಜು ಬಳಿಯಿರುವ ಲೇಔಟ್ ಪ್ರದೇಶದಲ್ಲಿ ವಿದ್ಯಾರ್ಥಿನಿಯನ್ನು ಕೊಲೆಗೈದ ದುಷ್ಕರ್ಮಿ ಯುವಕ, ತದನಂತರ ಅಲ್ಲಿಂದ ಪರಾರಿಯಾಗಿ ಸೀದಾ ಲಿಂಗಸುಗೂರಿನ ಪೊಲೀಸ್ ಠಾಣೆಗೆ ತಾನೆಯೇ ಹೋಗಿ ಸರಂಡರ್ ಆಗಿದ್ದಾನೆಂದು ತಿಳಿದುಬಂದಿದೆ.
ಬೆಚ್ಚಿಬಿದ್ದ ವಿದ್ಯಾರ್ಥಿಗಳು, ಆತಂಕದ ವಾತಾವರಣ
ಬೆಳಿಗ್ಗೆ ನಡೆದ ಕೊಲೆ ಘಟನೆ ಕಾಡ್ಗಿಚ್ಚಿನಂತೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಹಬ್ಬಿ ತಂಡೋಪ ತಂಡವಾಗಿ ಜನರು ಘಟನಾ ಪ್ರದೇಶಕ್ಕೆ ಆಗಮಿಸಿದರು. ತದನಂತರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್‌ಪಿ ಎಸ್.ಬಿ.ತಳವಾರ, ಸಿಪಿಐ ವೀರಾರೆಡ್ಡಿ, ಟ್ರಾಫಿಕ್ ಪಿಎಸ್‌ಐ ವೆಂಕಟೇಶ್ ಚೌಹಾಣ್, ತುರ್ವಿಹಾಳ ಠಾಣೆ ಪಿಎಸ್‌ಐ ಯರಿಯಪ್ಪ ಸೇರಿದಂತೆ ಪೊಲಿಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಕಂಡುಬAತು.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ತಮ್ಮ ಮಗಳು ಕೊಲೆಗೀಡಾಗಿದ್ದಾಳೆಂದು ತಿಳಿದು ಘಟನಾ ಸ್ಥಳಕ್ಕೆ ಲಿಂಗಸುಗೂರಿನಿAದ ಆಗಮಿಸಿದ ಪಾಲಕರು, ಕುಟುಂಬದ ಸಂಬAಧಿಗಳ ಆಕ್ರಂದನ ಮುಗಿಲು ಮುಟ್ಟಿತು. ಮಗಳ ದಾರುಣ ಸಾವು ನೆನೆದು ಕಣ್ಣೀರಾದರು.
ಎಸ್ಪಿ ಪುಟ್ಟಮಾದಯ್ಯ ಭೇಟಿ
ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿ ಶಿಫಾ ದಾರುಣವಾಗಿ ಕೊಲೆಗೀಡಾದ ಘಟನೆ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪೊಲೀಸ್ ಇಲಾಖೆ ಅಧಿಕಾರಿಗಳು ಇನ್ನಿತರರು ಇದ್ದರು.