ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 28
ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಗೋಡೆಗಳಿಗೆ ವಿವಿಧ ಬಣ್ಣಗಳ ಲೈಟಿಂಗ್‌ಗಳು ಅಂದ ಹೆಚ್ಚಿಸಿವೆ. ವಿಶೇಷ ಲೈಟಿಂಗ್ ಬೆಳಕು ಗೋಡೆಯ ಮೂಲಕ ಪ್ರತಿಫಲಿಸುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪಿಡಬ್ಲುö್ಯಡಿ ಕ್ಯಾಂಪಿನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಈ ಆಸ್ಪತ್ರೆಗೆ ಜನದಟ್ಟಣೆ ಕಡಿಮೆಯಾಗಿದೆ. ಸೌಲಭ್ಯಗಳ ಕೊರತೆಯ ನಡುವೆ ಆಸ್ಪತ್ರೆ “ಲೈಟಿಂಗ್”ನಿಂದ ಮಾತ್ರ ಮಿಂಚುತ್ತಿದೆ ಎಂಬುದು ಹಲವರ ಮಾತಾಗಿದೆ.

