ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 15
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ನಿರ್ಧಾರವನ್ನು ರಾಜ್ಯ ಸರಕಾರ ಕೈಬಿಟ್ಟು, ಕೆಐಎಡಿಬಿ ಅಧಿಸೂಚನೆಯನ್ನು ರದ್ದುಗೊಳಿಸಿರುವುದಾಗಿ ಸಿಎಂ ಘೋಷಿಸಿರುವುದು ಸ್ವಾಗತಾರ್ಹ ಕ್ರಮವಾಗಿದ್ದು, ಇದು ರೈತರ ಹೋರಾಟಕ್ಕೆ ಸಂದ ಐತಿಹಾಸಿಕ ಗೆಲುವಾಗಿದೆ ಎಂದು ಸಿಪಿಐ(ಎಂಎಲ್)ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ದೇವನಹಳ್ಳಿ ರೈತರ ಊಳುವ ಭೂಮಿ ಉಳಿಸಿಕೊಳ್ಳುವ ಹೋರಾಟ ಯಶಸ್ವಿಯಾಗಿದೆ. ಹೋರಾಟನಿರತ ಎಲ್ಲಾ ರೈತರಿಗೆ ಮತ್ತು ರೈತ ಸಂಘಟನೆಗಳ ಹೋರಾಟ ಸಮಿತಿಗೆ ಧನ್ಯವಾದಗಳು. ಅಂತಿಮ ಅಧಿಸೂಚನೆ ಹಿಂಪಡೆದ ಮುಖ್ಯಮಂತ್ರಿಗಳಿಗೆ ಗೌರವ ವಂದನೆಗಳು. ಇದು ಇಡೀ ಕರ್ನಾಟಕಕ್ಕೆ ಅನ್ವಯಿಸುವಂತಾಗಲಿ. ಕೃಷಿಯನ್ನು ಕೆಡಿಸಿ ಕೈಗಾರಿಕೆ ಬಂದರೆ ಅಭಿವೃದ್ಧಿಯಲ್ಲ. ಕೃಷಿ ಕೈಗಾರಿಕೆ ದೇಶದ ಆರ್ಥಿಕತೆಯ ಎರಡು ದುಡಿಯೋ ಕೈಗಳು ಇದ್ದಂತೆ ಎನ್ನುವುದು ನಮ್ಮ ಅಭಿಪ್ರಾಯ ಎಂದು ಹೇಳಿದ್ದಾರೆ.

ಕಳೆದ 1198 ದಿನಗಳ ಕಾಲ ಹೋರಾಟ ನಡೆಸಿದ ಚನ್ನರಾಯಪಟ್ಟಣ ಹಾಗೂ ದೇವನಹಳ್ಳಿ 13 ಹಳ್ಳಿಗಳಲ್ಲಿನ ಒಟ್ಟು 1777 ಎಕರೆ ಭೂ ಸ್ವಾಧೀನ ಕೈಬಿಡುತ್ತೇವೆಂದು 15-07-2025ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದು ಸ್ವಾಗತಾರ್ಹವಾದದ್ದು, ದೇವನಹಳ್ಳಿ ಚಲೋ ಮತ್ತು ಪ್ರೀಡಂ ಪಾರ್ಕ್ನಲ್ಲಿ ನಡೆದ ಹೋರಾಟದಲ್ಲಿ ಕರ್ನಾಟಕ ರೈತ ಸಂಘ (ಎಐಕೆಕೆಎಸ್) ವೂ ಸಹ ಹೋರಾಟ ಸಮಿತಿ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ (ಆರ್ಸಿಎಫ್) ಕೂಡಾ ಒಂದು ಭಾಗವಾಗಿ ಕೆಲಸ ಮಾಡಿದೆ ಎಂದಿದ್ದಾರೆ.

“ಕೃಷಿಯೋಗ್ಯ ಭೂಮಿ ಕೈಗಾರಿಕೆಗಳ ಪಾಲಾಗದಿರಲಿ”
ಯಾವ ಕಾರಣಕ್ಕೂ ಕೃಷಿಯೋಗ್ಯ ಭೂಮಿಯನ್ನು ಕೈಗಾರಿಕೆಗಾಗಿ ಅಥವಾ ಇತರೆ ಕೆಲಸಗಳಿಗಾಗಿ ಸರ್ಕಾರ ನೀಡಬಾರದು. ಬಂಜರು ಮತ್ತು ಕೃಷಿ ಯೋಗ್ಯವಲ್ಲದ ಭೂಮಿಯನ್ನು ಕೈಗಾರಿಕೆಗಾಗಿ ಬಳಸಲಿ. ಬಲವಂತದಿAದ ಭೂಮಿ ಕಸಿದುಕೊಳ್ಳುವ ನಿಯಮವನ್ನು ದೇವನಹಳ್ಳಿ ಅಷ್ಟೇ ಅಲ್ಲ; ರಾಜ್ಯದ ಇತರೆ ಜಿಲ್ಲೆಯಲ್ಲಿಯೂ ಕೂಡಾ ಇದೆ ನಿರ್ಣಯವನ್ನು ಅನ್ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತೇವೆ. ಹಾಗೆಯೇ ದಲಿತ, ಹಿಂದುಳಿದ ಭೂ ರಹಿತರಿಗೆ ಸರ್ಕಾರಿ ಹೆಚ್ಚುವರಿ, ಗೈರಾಣ, ಪರಂಪೋಕ್, ಖಾರೀಜಖಾತಾ ಭೂಮಿಗಳ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು. ಮತ್ತು ಭಾರೀ ಭೂ ಮಾಲೀಕರ ವಶದಲ್ಲಿರುವ ಲಕ್ಷಾಂತರ ಎಕರೆ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ಸರ್ಕಾರ ಭೂ ರಹಿತ ಕೃಷಿ ಕೂಲಿಕಾರ ಬಡವರಿಗೆ ಭೂಮಿ ವಿತರಿಸಲು ಮುಂದಾಗಬೇಕೆAದು ಎಂದು ಎಂ.ಗAಗಾಧರ ಆಗ್ರಹಿಸಿದ್ದಾರೆ.
