ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಮೇ 14
ಸಿಂಧನೂರು ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು ಅವರನ್ನು ಸೇವೆಯಿಂತ ಅಮಾನತುಗೊಳಿಸಿ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ನಗರಸಭೆಯಲ್ಲಿ 2022-23 ಮತ್ತು 2023-24ನೇ ಸಾಲಿನ ಅವಧಿಯಲ್ಲಿ ಅನಧಿಕೃತ ಕಟ್ಟಡ, ತೆರಿಗೆ ವಸೂಲಾತಿ, ನಮೂನೆ-3, ಪರಿಶಿಷ್ಟ ಜಾತಿ ಹಾಗೂ ಪಂಗಡದ ನಿಧಿ ಶೇ.24.15, ನೀರು ಸರಬರಾಜು, ತ್ಯಾಜ್ಯ ನಿರ್ವಹಣೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವ ಕುರಿತು ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ಇತ್ತೀಚೆಗೆ ತನಿಖೆಗೆ ಆದೇಶಿಸಲಾಗಿತ್ತು.
ತನಿಖೆಯಲ್ಲಿ ಕರ್ತವ್ಯಲೋಪ ಮೇಲ್ನೋಟಕ್ಕೆ ಸಾಬೀತು ?
ಈ ಬಗ್ಗೆ ತುಮಕೂರು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರ ನೇತೃತ್ವದ ತಂಡವು ನಗರಸಭೆಗೆ ಭೇಟಿನೀಡಿ ತನಿಖೆ ನಡೆಸಿತ್ತು. ಹೊಸ ವಿನ್ಯಾಸ ಮತ್ತು ಬಡಾವಣೆ, ವಾಣಿಜ್ಯ ಮಳಿಗೆಗಳು, ಕಟ್ಟಡ ಪರವಾನಗಿ, ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕ, 15ನೇ ಹಣಕಾಸು ಯೋಜನೆ, ಆಸ್ತಿ ತೆರಿಗೆ ಮತ್ತು ಇ-ಸ್ವತ್ತು ಇತರೆ ಕಾಮಗಾರಿಗಳಿಗೆ ಸಂಬAಧಿಸಿದAತೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬAದಿದೆ ಎಂದು ತಂಡ ವರದಿಯಲ್ಲಿ ಪ್ರಸ್ತಾಪಿಸಿತ್ತು.
ಕಾರಣ ಕೇಳಿ ನೋಟೀಸ್
ಈ ಕುರಿತು 7 ದಿನದೊಳಗೆ ಲಿಖಿತ ಸಮಜಾಯಿಸಿ ಸಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮ ಹೇಳಿಕೆ ಏನು ಇಲ್ಲವೆಂದು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ನೀಡಲಾಗಿತ್ತು. ಆದರೆ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರು ಕಾರಣ ಕೇಳುವ ನೋಟಿಸ್‌ಗೆ ಸಮಜಾಯಿಸಿ ಸಲ್ಲಿಸಲು 20 ದಿನ ಕಾಲಾವಕಾಶ ನೀಡುವಂತೆ ಕೋರಿದ್ದರು ಎಂದು ಹೇಳಲಾಗಿದೆ.
“ಸಿಂಧನೂರು ನಗರಸಭೆ ಪೌರಾಯುಕ್ತರಾಗಿ ಈ ಅಧಿಕಾರಿಯನ್ನೇ ಮುಂದುವರಿಸಿದಲ್ಲಿ ಪ್ರಕರಣಕ್ಕೆ ಸಂಬAಧಪಟ್ಟ ದಾಖಲೆಗಳನ್ನು ನಾಶಪಡಿಸುವ ಹಾಗೂ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಂಭವವಿದೆ ಎಂದು ಭಾವಿಸಿ, ತನಿಖಾ ತಂಡದ ವರದಿಯನ್ನು ಆಧರಿಸಿ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಸಿಂಧನೂರು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ವಿರುದ್ಧದ ಆರೋಪಗಳ ಕುರಿತು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿಯವರೆಗೆ ಮಂಜುನಾಥ ಗುಂಡೂರು ಅವರನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಪುರಸಭೆಯಲ್ಲಿ ಖಾಲಿಯಿರುವ ಮುಖ್ಯಾಧಿಕಾರಿ ಶ್ರೇಣಿ-1 ಹುದ್ದೆಗೆ ಬದಲಾಯಿಸಿ ಆದೇಶಿಸಲಾಗಿದೆ.
ಎಮ್ಮೆಲ್ಸಿಯವರೊಂದಿಗಿನ ಮುನಿಸು ಕಾರಣವಾಯಿತೇ ?
ಹಾಲಿ ಶಾಸಕ ಹಂಪನಗೌಡ ಬಾದರ್ಲಿಯವರು ಹಾಗೂ ಎಮ್ಮೆಲ್ಸಿ ಬಸನಗೌಡ ಬಾದರ್ಲಿಯವರ ನಡುವಿನ ರಾಜಕೀಯ ತಿಕ್ಕಾಟ ಕೆಲ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ನಗರಸಭೆ ಪೌರಾಯುಕ್ತರು ಹಾಲಿ ಶಾಸಕರ ಪರ ವಾಲಿದ್ದೇ ಎಮ್ಮೆಲ್ಸಿಯವರಿಗೆ ಇರುಸು-ಮುರುಸು ಉಂಟು ಮಾಡಿತ್ತು. ಹೀಗಾಗಿ ನಗರಸಭೆ ಅವ್ಯವಹಾರಗಳಿಗೆ ಸಂಬAಧಿಸಿದAತೆ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರು ದನಿ ಎತ್ತಿ ತನಿಖೆಗೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಪೌರಾಯುಕ್ತರ ಅಮಾನತು ಆದೇಶವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.