ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಮೇ 13
ನಗರದಲ್ಲಿ ಮಧ್ಯಾಹ್ನ 2.30 ಗಂಟೆ ಸುಮಾರು ಕಾರ್ಮೋಡ ಕವಿದ ಪರಿಣಾಮ ಬಿಸಿಲು ಮಾಯವಾಗಿ ಜನಸಾಮಾನ್ಯರಿಗೆ ಸಂಜೆಯ ಅನುಭವ ನೆನಪಿಸಿತು. ಮಧ್ಯಾಹ್ನ 12 ಗಂಟೆಯವರೆಗೂ ಬಿರು ಬಿಸಿಲಿತ್ತು. ತದನಂತರ ವಾತಾವರಣದಲ್ಲಿ ಬದಲಾವಣೆಯಾದ ಪರಿಣಾಮ ಕಾರ್ಮೋಡ ಕವಿದು ಎಲ್ಲೆಡೆ ಸಂಜೆಯ ಕತ್ತಲು ಕಂಡುಬಂತು. ಬೇಸಿಗೆಯಲ್ಲಿ ದಿಢೀರನೇ ಇದೇನಿದು !! ಎಂದು ಸಾರ್ವಜನಿಕ ಅಚ್ಚರಿ ವ್ಯಕ್ತಪಡಿಸಿದರು. ಮಧ್ಯಾಹ್ನ 3 ಗಂಟೆಯ ಸುಮಾರು ಕೆಲವೊತ್ತು ಮಳೆಯೊಂದಿಗೆ ಮಿಂಚು-ಗುಡುಗಿನ ಆರ್ಭಟ ಮುಂದುವರಿಯಿತು. ಉರಿ ಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ತಂಪನೆಯ ವಾತಾವರಣ ನಿಟ್ಟುಸಿರು ಬಿಡುವಂತೆ ಮಾಡಿತು.
