ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 9
ರಾಜ್ಯ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿ ವಿಜೇತರನ್ನು ದಿನಾಂಕ: 09-01-2026 ಶುಕ್ರವಾರದಂದು ಪ್ರಕಟಿಸಿದ್ದು, ವಿಜಯ ಕರ್ನಾಟಕ ಸಿಂಧನೂರು ತಾಲೂಕು ವರದಿಗಾರ ಚಂದ್ರಶೇಖರ ಬೆನ್ನೂರು ಅವರಿಗೆ ಅಭಿಮನ್ಯ ದತ್ತಿ ಪ್ರಶಸ್ತಿ ದೊರೆತಿದೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ, ಸಿಂದೊಳ್ಳು ಜನರ ಜೀವನವೇ ಗೋಳು’ ಎನ್ನುವ ತಳ ಸಮುದಾಯದ ಬಗೆಗಿನ ಮಾನವೀಯ ವರದಿಗೆ ಪ್ರಶಸ್ತಿ ಸಂದಿದೆ. ಪ್ರಶಸ್ತಿ ವಿಜೇತರಿಗೆ ಮಾಧ್ಯಮದ ಮಿತ್ರರು ಅಭಿನಂದಿಸಿದ್ದಾರೆ.
