ನಮ್ಮ ಸಿಂಧನೂರು, ಜುಲೈ 9
ಲಡಾಕ್ ಮತ್ತು ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಹುತಾತ್ಮರಾದ ಸೇನಾ ಯೋಧರ ಸ್ಮರಣೆ ನಿಮಿತ್ತ ಜೈ ಜವಾನ್ ಜೈ ಕಿಸಾನ್ ಜನಪರ ಜಾಗೃತ ಸೇವಾ ಸಮಿತಿ (ರಿ) ವತಿಯಿಂದ ಸೋಮವಾರ ಸಂಜೆ ಕ್ಯಾಂಡಲ್ ಮಾರ್ಚ್ ನಡೆಸಿ ಗೌರವ ಸಲ್ಲಿಸಲಾಯಿತು. ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಪ್ರಕಾಶ ಗೋನವಾರ ಅವರ ನೇತೃತ್ವದಲ್ಲಿ ನಗರದ ಎಪಿಎಂಸಿಯ ಗಣೇಶ್ ದೇವಸ್ಥಾನದಿಂದ ಗಾಂಧಿ ಸರ್ಕಲ್ವರೆಗೆ ಜಾಥಾ ನಡೆಸಿದ ಸೇವಾ ಸಮಿತಿಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಗಾಂಧಿ ಪ್ರತಿಮೆ ಬಳಿ ಸೇರಿ ಹುತಾತ್ಮ ಯೋಧರ ಭಾವಚಿತ್ರಗಳಿಗೆ ಹೂಹಾರ ಹಾಕುವ ಮೂಲಕ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.