ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 1
ರಾಯಚೂರು ನಗರದಲ್ಲಿ ಡಿಸೆಂಬರ್ 14 ಮತ್ತು 15ರಂದು 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ರಾಜ್ಯಮಟ್ಟದ ಲೇಖಕರು ಮತ್ತು ವಿಮರ್ಶಕರಿಂದ ವೈಚಾರಿಕ ಲೇಖನಗಳಿಗೆ ಆಹ್ವಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಲೇಖಕರು ಕಳುಹಿಸುವ ಬರಹಗಳು ದಲಿತ ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಆರ್ಥಿಕ, ರಾಜಕೀಯ ಕುರಿತು ಹಾಗೂ ಮೌಢ್ಯ-ಕಂದಾಚಾರಗಳನ್ನು ಹೋಗಲಾಡಿಸಿ, ವೈಚಾರಿಕತೆ ಬೆಳೆಸುವ, ಶೈಕ್ಷಣಿಕವಾಗಿ ಎದುರಿಸುತ್ತಿರುವ ಸಮಸ್ಯೆ-ಸವಾಲುಗಳ ಹಾಗೂ ಪರಿಹಾರಗಳ ಕುರಿತ ವಿಷಯ ವಸ್ತುಗಳನ್ನೊಳಗೊಂಡ ಲೇಖನಗಳನ್ನು ಕಳುಹಿಸಬಹುದಾಗಿದೆ. ಲೇಖಕರು ತಮ್ಮ ಲೇಖನಗಳೊಂದಿಗೆ ಇತ್ತೀಚಿನ ಒಂದು ಭಾವಚಿತ್ರವನ್ನು ಕಳುಹಿಸಬೇಕು. ಬರಹ ಪ್ರಕಟಿಸಲು ಅಂತಿಮವಾಗಿ ಸಂಪಾದಕ ಮಂಡಳಿಗೆ ಬಿಟ್ಟಿರುತ್ತದೆ. ತಮ್ಮ ಬರಹವು 4.0 ಕನ್ನಡ ನುಡಿ ತಂತ್ರಾAಶದಲ್ಲಿ ಟೈಪ್‌ಮಾಡಿ, ವಾಟ್ಸಾಪ್ ನಂಬರ್‌ಗಾಗಲಿ, ಇಮೇಲ್‌ಗಾಗಲಿ ಅಥವಾ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷರ ತಾಯರಾಜ್ ಮರ್ಚಟ್ಹಾಳ್ ಹಾಗೂ ಕೃತಿ ಸಂಪಾದಕರಾದ ಡಾ.ಅರುಣಕುಮಾರ ಬೇರ್ಗಿ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖನ ಕಳುಹಿಸುವ ವಿಳಾಸಗಳು (ಇಲ್ಲಿ ಹೆಸರಿಸಿದ ಯಾರಾದರೊಬ್ಬರ ವಿಳಾಸಕ್ಕೆ ಲೇಖನ ಕಳುಹಿಸಬಹುದು)
1) ಡಾ.ಅರುಣಕುಮಾರ ಬೇರಿಗಿ, ಸಂಪಾದಕರು (ದಲಿತೋದಯ) ಸ್ಮರಣ ಸಂಚಿಕೆ ಹಾಗೂ ಪ್ರಾಂಶುಪಾಲರು, ನೊಬೆಲ್ ಪದವಿ ಮಹಾವಿದ್ಯಾಲಯ, ರೇಣುಕಾ ಆಸ್ಪತ್ರೆ ಎದುರುಗಡೆ ಆದರ್ಶ ಕಾಲೋನಿ ಸಿಂಧನೂರು. ಪಿನ್ ಕೋಡ್-584128, ಮೊಬೈಲ್ ಸಂಖ್ಯೆ -9986779687, dspraichur@gmail.com
2) ಈಶ್ವರ ಹಲಗಿ, ಪತ್ರಿಕಾ ಸಲಹೆಗಾರರು, ದಲಿತ ಸಾಹಿತ್ಯ ಪರಿಷತ್ತು, ಜಿಲ್ಲಾ ರಾಯಚೂರು. ಮೊ: 78292 80367
3) ಶಂಕರ ಗುರಿಕಾರ, ಸಂಘಟನಾ ಸಂಚಾಲಕರು, ದಲಿತ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಸಿಂಧನೂರು. ಮೊ: 98806 21724
4) ಡಾ.ಹುಲಿಯಪ್ಪ ನಾಯಕ, ಉಪಾಧ್ಯಕ್ಷರು, ದಲಿತ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಮಾನವಿ. ಮೊ: 90365 53046
5) ಡಾ.ಮಲ್ಲಿಕಾರ್ಜುನ ಕಮತಗಿ, ಖಜಾಂಚಿಗಳು, ದಲಿತ ಸಾಹಿತ್ಯ ಪರಿಷತ್ತು, ತಾಲೂಕು ಯುವಘಟಕ ಸಿಂಧನೂರು.ಮೊ: 98807 84470
6) ಪಾರ್ಥ ಸಿರವಾರ, ಜಿಲ್ಲಾಧ್ಯಕ್ಷರು, ದಲಿತ ಸಾಹಿತ್ಯ ಪರಿಷತ್ತು, ಜಿಲ್ಲಾ ಯುವಘಟಕ ರಾಯಚೂರು. E-mail:- dspraichur@gmail.com