ಸಿಂಧನೂರು: ಇದು ‘ನಮ್ಮ ಸಿಂಧನೂರು ವೆಬ್ ನ್ಯೂಸ್’ ಇಂಪ್ಯಾಕ್ಟ್, ಬ್ರಿಡ್ಜ್ ಬೋಂಗಾ ಸುತ್ತ ಉಸುಕಿನ ಚೀಲ ಇಟ್ಟ ಇಲಾಖೆಯವರು

Spread the love

ನಮ್ಮ ಸಿಂಧನೂರು, ಮೇ 15
ಎನ್ನೆಚ್ 150ಎ ಸಿಂಧನೂರು-ಮಸ್ಕಿ ಮಾರ್ಗದ ಬೂತಲದಿನ್ನಿ-ಕಲ್ಲೂರು ಮಧ್ಯದ ಪೆಟ್ರೋಲ್ ಬಂಕ್ ಬಳಿಯಿರುವ ಬ್ರಿಡ್ಜ್ಗೆ ಬೋಂಗಾ ಬಿದ್ದಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಇಲಾಖೆಯವರು ತಾತ್ಕಾಲಿಕವಾಗಿ ಉಸುಕಿನ ಚೀಲ ಹಾಗೂ ಫಲಕ ಇಟ್ಟಿದ್ದಾರೆ. ಈ ಕುರಿತು ‘ನಮ್ಮ ಸಿಂಧನೂರು ವೆಬ್ ನ್ಯೂಸ್ ತಾಣ’ ದಿನಾಂಕ: 12-05-2024ರಂದು “ಬೋಂಗಾ ಬಿದ್ದ ಬ್ರಿಡ್ಜ್ ಕುಸಿಯುವ ಭೀತಿ, ರಾಷ್ಟ್ರೀಯ ಹೆದ್ದಾರಿಗೆ ‘ತೆಂಗಿನ ಪೊರಕೆ’ ಆಸರೆ !” ಎಂಬ ಶೀರ್ಷಿಕೆಯಡಿ ಇಲಾಖೆಯವರ ಗಮನ ಸೆಳೆದಿತ್ತು. ಈ ಮಾರ್ಗದಲ್ಲಿ ದಿನವೂ ಸಾವಿರಾರು ವಾಹನಗಳು ಸಂಚರಿಸುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ವಿಳಂಬ ಮಾಡದೇ ಬ್ರಿಡ್ಜ್ ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *