ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 9
ನಗರದ ತಾಲೂಕು ಕ್ರೀಡಾಂಗಣದಲ್ಲಿ ಚೈತ್ರಾ.ಸಿ.ಸಿ ಗೆಳೆಯರ ಬಳಗದ ವತಿಯಿಂದ ಸಿಂಧನೂರು ಪ್ರೀಮಿಯರ್ ಲೀಗ್ 2025ರ ಅಂಗವಾಗಿ ಗುರುವಾರ ಬೆಳಿಗ್ಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಕ್ರೀಡಾಪಟುಗಳು ಸೇರಿದಂತೆ ರಕ್ತದಾನಿಗಳು ಸ್ವಯಂಪ್ರೇರಣೆ ಯಿಂದ ರಕ್ತದಾನ ಮಾಡಿದರು. ಈ ವೇಳೆ ಚೈತ್ರಾ ಸಿಸಿ ಗೆಳೆಯರ ಬಳಗದ ಅಧ್ಯಕ್ಷ ನಾಗರಾಜ ಗಸ್ತಿ, ಸುರೇಶ ಸುಕಾಲಪೇಟೆ, ರವಿ ಉಪ್ಪಾರ, ವಾಗೇಶ, ಪ್ರಶಾಂತ ಕಿಲ್ಲೇದ್, ರಾಜಶೇಖರ ಹಿರೇಮಠ, ರಘು ಸಚಿನ್, ದೇವು ನಾಯಕ, ಸೋಮು.ಪಿ, ಬುದ್ದ, ಚಂದ್ರಶೇಖರ, ನಾಗರಾಜ ಬಜಾರಿ, ಶಿವರಾಜ.ಎಸ್.ಆರ್.ಕೆ ಮತ್ತಿತರರು ಇದ್ದರು.