ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 23
ಧೀರೋದಾತ್ತವಾಗಿ ಬ್ರಿಟಿಷರ ವಿರುದ್ಧ ಹೋರಾಟ ದೇಶದ ಜನರ ಸಲುವಾಗಿ ಪ್ರಾಣಾರ್ಪಣೆಗೈದ ಭಗತ್‌ಸಿಂಗ್, ಸುಖದೇವ್, ರಾಜ್‌ಗುರು ಸೇರಿದಂತೆ ಎಲ್ಲ ಸ್ವಾತಂತ್ರö ಹೋರಾಟಗಾರರ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಶ್ರಮಿಸಬೇಕಿದೆ ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಕರೆ ನೀಡಿದರು.
ನಗರದ ಶಾದಿಮಹಲ್‌ನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ದಲಿತ ಸಾಹಿತ್ಯ ಪರಿಷತ್, ಮೇ ಸಾಹಿತ್ಯ ಮೇಳ ಹಾಗೂ ಕ್ರಾಂತಿಕಾರಿ ಭಗತ್‌ಸಿಂಗ್ ಅಭಿಮಾನಿಗಳ ಬಳಗ ತಿಡಿಗೋಳ ವತಿಯಿಂದ ಭಗತ್‌ಸಿಂಗ್ ಹುತಾತ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಜನರ ವಿಮೋಚನೆಗಾಗಿ ಲಕ್ಷಾಂತರ ಜನರು ಪ್ರಾಣಕೊಟ್ಟು ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟರೆ, ಅಧಿಕಾರ ಚುಕ್ಕಾಣಿ ಹಿಡಿದ ಫ್ಯಾಸಿಸ್ಟ್ ಶಕ್ತಿಗಳು ಬಂಡವಾಳಿಶಾಹಿ ಹಾಗೂ ಕಾರ್ಪೊರೇಟ್ ಗುಲಾಮಿತನವನ್ನು ರೂಢಿಸಿಕೊಂಡು ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರು ಹಾಗೂ ಮಹಿಳೆಯರನ್ನು ಬೀದಿಗೆ ತಳ್ಳಿವೆ. ಪ್ರಭುತ್ವದ ಜನದ್ರೋಹಿತನದಿಂದ ದುಡಿಯುವ ವರ್ಗ ಭಾರಿ ಬಿಕ್ಕಟ್ಟಿಗೆ ಸಿಲುಕಿದ್ದು, ಜಾಗತೀಕರಣ, ಖಾಸಗೀಕರಣ ಹಾಗೂ ಉದಾರೀಕರಣದ ನೀತಿಗಳು ಜನರನ್ನು ಹುರಿದು ಮುಕ್ಕುತ್ತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಾರೆಪ್ಪ ರಾಯಚೂರು, ಅಶೋಕ ನಂಜಲದಿನ್ನಿ, ದಲಿತ ಸಾಹಿತ್ಯ ಪರಿಷತ್‌ನ ರಾಮಣ್ಣ ಹಿರೇಬೇರಿಗಿ, ಬಸವಕೇಂದ್ರದ ಬಸವಲಿಂಗಪ್ಪ ಬಾದರ್ಲಿ, ಗಂಗಮ್ಮ ಗೊರಬಾಳ, ಬಸವಂತರಾಯಗೌಡ, ದೇವೇಂದ್ರಗೌಡ, ಶ್ರೀನಿವಾಸ ಕಲವಲದೊಡ್ಡಿ, ಡಿ.ಎಚ್.ಕಂಬಳಿ, ಚಂದ್ರಶೇಖರ ಗೊರಬಾಳ, ಬಸವರಾಜ ಬಾದರ್ಲಿ, ಶಿವಪುತ್ರ ತುರ್ವಿಹಾಳ, ಶಂಕರ ಗುರಿಕಾರ, ಎಂ.ಲಿoಗಪ್ಪ ಸೇರಿದಂತೆ ಇನ್ನಿತರರಿದ್ದರು.