ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 22
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗಾಗಿ ದಾಖಲಾಗಿದ್ದ ತಾಲೂಕಿನ ಆರ್.ಎಚ್.ಕ್ಯಾಂಪ್-3ರ ಗರ್ಭಿಣಿಯೊಬ್ಬರು, ಹೆರಿಗೆ ನಂತರ ಮೃತಪಟ್ಟ ಘಟನೆ ದಿನಾಂಕ: 21-10-2024 ಸೋಮವಾರ ರಾತ್ರಿ ನಡೆದಿದೆ. ಮಹಿಳೆ ಮೃತಪಟ್ಟಿದ್ದು, ಕೂಸು ಆರೋಗ್ಯವಾಗಿದೆ. ತನ್ನ ಪತ್ನಿ ಸಾವಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಯ ನಿರ್ಲಕ್ಷö್ಯವೇ ಕಾರಣ ಎಂದು ಮೃತ ಮಹಿಳೆಯ ಪತಿ ಹಾಗೂ ಪೋಷಕರು ಆರೋಪಿಸಿದ್ದಾರೆ.
ಆರ್.ಎಚ್.ಕ್ಯಾಂಪ್‌ನ ಮೌಸಂಬಿ ಮಂಡಲ್ ಗಂಡ ಮಹೇಶ್ವರ ಮಂಡಲ್ ಮೃತ ಮಹಿಳೆಯಾಗಿದ್ದಾಳೆ. ದಿನಾಂಕ: 21-10-2024ರಂದು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಹೆರಿಗೆಯಾದ ನಂತರ ಬಾಣಂತಿಗೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗುತ್ತಿದೆ.
ವೈದ್ಯರು, ಸಿಬ್ಬಂದಿಯೊಂದಿಗೆ ವಾಗ್ವಾದ
ಮೌಸಂಬಿ ಮಂಡಲ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆರ್.ಎಚ್.ಕ್ಯಾಂಪ್ 3ರಲ್ಲಿರುವ ಅವರ ಸಂಬAಧಿಕರು ರಾತ್ರಿ 10 ಗಂಟೆ ಸುಮಾರು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದರು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯೊAದಿಗೆ ಮಾತಿನ ಚಕಮಕಿ ನಡೆಸಿದರು. “ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಟ್ಟಿದ್ದರೆ ಮೌಸಂಬಿ ಉಳಿಯುತ್ತಿದ್ದಳು, ನಿಮ್ಮ ನಿರ್ಲಕ್ಷö್ಯದಿಂದ ಸಾವಾಗಿದೆ. ಇಲ್ಲಿಗೆ ನಾವು ಬಿಡುವುದಿಲ್ಲ, ಈ ವಿಷಯವನ್ನು ಕೋರ್ಟ್ನಲ್ಲಿ ದಾವೆ ಹೂಡುತ್ತೇವೆ. ಇನ್ನು ಎಷ್ಟು ಜನರು ಇಲ್ಲಿ ಬಲಿಯಾಗಬೇಕಿದೆ” ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರ ನಿರ್ಲಕ್ಷ್ಯ ಆರೋಪ
“ಹೆರಿಗಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಇರಲಿಲ್ಲ. ನರ್ಸ್ಗಳೇ ಹೆರಿಗೆ ಮಾಡಿಸಿದರು. ಹೆರಿಗೆಯೇನು ಆಯಿತು. ನಂತರ ಬಾಣಂತಿಗೆ ಆರೋಗ್ಯದಲ್ಲಿ ಏರುಪೇರಾಯಿತು. ವೈದ್ಯರು ಇಲ್ಲದೇ ಇರುವುದರಿಂದ ನರ್ಸ್ಗಳೇ ಚಿಕಿತ್ಸೆ ನೀಡಿದರು. ರಾತ್ರಿ 9 ಗಂಟೆಗೆ ಮೈಯೆಲ್ಲಾ ಸಂಪೂರ್ಣ ತಣ್ಣಗಾದ ನಂತರ, ಅವಸರವಸರದಿಂದ ಚಿಕಿತ್ಸೆ ಕೊಟ್ಟವರಂತೆ ಮಾಡಿದರು. ಇಲ್ಲ ಸೀರಿಯಸ್ ಇದೆ ನೀವು ರಾಯಚೂರಿನ ಆಸ್ಪತ್ರೆಗೆ ಹೋಗಿ ಎಂದು ಹೇಳಿದರು. ಅಷ್ಟೊತ್ತಿಗಾಗಲೇ ನಮ್ಮ ಮಗಳು ಪ್ರಾಣಬಿಟ್ಟಿದ್ದಳು. ಸರ್ಕಾರಿ ಆಸ್ಪತ್ರೆಯಲ್ಲಿ ಒಳ್ಳೆ ಚಿಕಿತ್ಸೆ ಸಿಗುತ್ತದೆ ಎಂದು ನಂಬಿ ನಮ್ಮ ಮಗಳನ್ನು ಕೈಯ್ಯಾರೆ ಕಳೆದುಕೊಂಡೆವು” ಎಂದು ಮೃತ ಮೌಸಂಬಿ ಮಂಡಲ್ ಸಂಬAಧಿಕರು ಕಣ್ಣೀರು ಹಾಕಿದರು.