ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 23
ಬಳಗಾನೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 10 ಲಕ್ಷ 25 ಸಾವಿರ ಬೆಲೆ ಬಾಳುವ 21 ಮೋಟರ್ ಸೈಕಲ್‌ಗಳನ್ನು ಜಪ್ತಿ ಮಾಡಿ, ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಳಗಾನೂರು ಠಾಣಾ ವ್ಯಾಪ್ತಿಯ ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಯಾಪಲಪರ್ವಿ ಕ್ರಾಸ್ ಹತ್ತಿರ, 11-07-2024ರಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್‌ವೊಂದು ಕಳ್ಳರು ಕಳವು ಮಾಡಿದ ಪ್ರಕರಣ 22-03-2025ರಂದು ದಾಖಲಾಗಿತ್ತು. ಈ ಪ್ರಕರಣದ ಜಾಡು ಹಿಡಿದು ಹೊರಟಾಗ ಇನ್ನಷ್ಟು ಬೈಕ್‌ಗಳ ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿವೆ. ಕಳ್ಳತನದ ಪ್ರಕರಣದ ಹಿನ್ನೆಲೆಯಲ್ಲಿ ಪುನಿತ್@ ಪುನ್ನಿ ಮಾನ್ವಿ, ಉದಯ್ ಮಾನ್ವಿ, ಗಣೇಶ ತೋರಣದಿನ್ನಿ, ನಜೀರ್ ಹಾರಾಪುರ, ಮುಕ್ಕಣ್ಣ ತಿಮ್ಮಾಪುರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲಾ ಎಸ್ಪಿ ಪುಟ್ಟಮಾದಯ್ಯ, ಹೆಚ್ಚುವರಿ ಎಸ್ಪಿ ಜಿ.ಹರೀಶ್, ಡಿಎಸ್‌ಪಿ ಬಿ.ಎಸ್.ತಳವಾರ, ಸಿಪಿಐ ವೀರಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬಳಗಾನೂರು ಠಾಣೆಯ ಪಿಎಸ್‌ಐ ಎರಿಯಪ್ಪ, ಎಎಸ್‌ಐ ಸಿದ್ದಪ್ಪ ಹಾಗೂ ಠಾಣೆಯ ಇನ್ನಿತರೆ ಸಿಬ್ಬಂದಿ ತನಿಖೆ ಕೈಗೊಂಡಿದ್ದರು.
