ಸಿಂಧನೂರು: ಹೊಟೇಲ್ ರಾಯಲ್ ದರ್ಬಾರ್ ಉದ್ಘಾಟಿಸಿದ ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ

Spread the love

ನಮ್ಮ ಸಿಂಧನೂರು, ಜುಲೈ 19
ನಗರದ ಗಂಗಾವತಿ ರಸ್ತೆಯ ಕರ್ನಾಟಕ ಬ್ಯಾಂಕ್ ಪಕ್ಕದಲ್ಲಿ ಸೈಯ್ಯದ್ ಜಾಫರ್ ಹುಸೇನ್ ಅವರ ಮಾಲೀಕತ್ವದ ಹೊಟೆಲ್ ರಾಯಲ್ ದರ್ಬಾರ್ ಅನ್ನು ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ ಅವರು ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಯುವಕರು ಹೊಸ ಹೊಸ ಉದ್ಯಮಗಳತ್ತ ಆಕರ್ಷಿತರಾಗಿ, ಯಶಸ್ವಿಯಾಗಿ ಕಟ್ಟುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ. ಆಹಾರೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದು, ಶುಚಿ-ರಚಿ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಉದ್ಯಮಿಯಾಗಿ ರೂಪುಗೊಳ್ಳಿ” ಎಂದು ಆಶಯ ವ್ಯಕ್ತಪಡಿಸಿದರು. ಈ ವೇಳೆ ಪ್ರಾಧಿಕಾರದ ಸದಸ್ಯ ಖಾಜಿಮಲಿಕ್ ವಕೀಲರು, ಕಾಂಗ್ರೆಸ್ ಯುವ ಮುಖಂಡ ಅಸ್ಲಂಪಾಷಾ, ಸೈಯ್ಯದ್ ಮಜಾರ್ ಹುಸೇನ್, ಇಮಾಮ್ ಹುಸೇನ್ ಎತ್ಮಾರಿ ಇನ್ನಿತರರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *