Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 30

ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ವೆಂಕನಗೌಡ (ಬಾಬುಗೌಡ ಬಾದರ್ಲಿ) ಅವರನ್ನು ನೇಮಿಸಿ, ಲತಾ.ಕೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ ಇವರು 30-06-2025 ಸೋಮವಾರದಂದು ಆದೇಶ ಹೊರಡಿಸಿದ್ದಾರೆ. ಅಲ್ಲದೇ ನಾಮ ನಿರ್ದೇಶನ ಸದಸ್ಯರನ್ನಾಗಿ ವೈ.ನರೇಂದ್ರನಾಥ ತಂದೆ ಸುಬ್ಬಾರಾವ್, ಚಂದ್ರಶೇಖರರೆಡ್ಡಿ ತಂದೆ ದೊಡ್ಡಪ್ಪ, ಖಾಜಿ ಮಲ್ಲಿಕ್ ತಂದೆ ಖಾಜಾ ಸಲೀಂ ಅಹ್ಮದ್ ವಕೀಲರು, ಮಮತ ಗಂಡ ಮೌಲಪ್ಪ ಇವರನ್ನು ನೇಮಿಸಲಾಗಿದೆ.
ಮುಸುಕಿನ ಗುದ್ದಾಟಕ್ಕೆ ತೆರೆ
ಕಳೆದ ಹಲವು ದಿನಗಳಿಂದ ಖಾಲಿ ಇದ್ದ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಹೊಸ ಅಧ್ಯಕ್ಷರು ಹಾ¬ಗೂ ಸದಸ್ಯರ ನೇಮಕ ಮಾಡುವುದಕ್ಕೆ ಸಂಬAಧಿಸಿದAತೆ, ಹಾಲಿ ಎಮ್ಮೆಲ್ಲೆ ಮತ್ತು ಎಮ್ಮೆಲ್ಸಿಯವರ ಬಣಗಳ ಮಧ್ಯೆ ಮುಸುಕಿನ ಗುದ್ದಾಟ ನಡೆದಿತ್ತು. ಕೊನೆಗೆ ಹೊಸ ಪದಾಧಿಕಾರಿಗಳ ನೇಮಕದಿಂದ ಇದಕ್ಕೆ ತೆರೆ ಬಿದ್ದಂತಾಗಿದೆ. ಎರಡೂ ಬಣಗಳು ಹೈಕಮಾಂಡ್‌ಗೆ ಪಟ್ಟಿ ಕಳುಹಿಸಿ, ತಮ್ಮದೇ ಪಟ್ಟಿಯನ್ನು ಫೈನಲ್ ಮಾಡುವಂತೆ ಒತ್ತಡ ಹೇರಿದ್ದವು ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.


Spread the love

Leave a Reply

Your email address will not be published. Required fields are marked *