ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 20
ಇಲ್ಲಿನ ಕುಷ್ಟಗಿ ಮಾರ್ಗದ ರಸ್ತೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ)ದ ತಾಲೂಕು ಘಟಕದ ನೂತನ ಕಾರ್ಯಾಲಯ ಉದ್ಘಾಟನೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಬೈಕ್ರ‍್ಯಾಲಿ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ವಾತಂತ್ರö್ಯ ಸೇನಾನಿ ಕಿತ್ತೂರುರಾಣಿ ಚನ್ನಮ್ಮರ ಪುತ್ಥಳಿಗೆ ಹೂವಿನಹಾರ ಹಾಕಿ ಗೌರವ ನಮನ ಸಲ್ಲಿಸಿದರು. ಈ ವೇಳೆ ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್, ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಇನ್ನಿತರರಿದ್ದರು. ಚನ್ನಮ್ಮಾಜಿ ಪುತ್ಥಳಿಗೆ ಗೌರವಾರ್ಪಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ತಾಲೂಕು ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಪ್ರಮುಖ ಬೀದಿಗಳಲ್ಲಿ ನೂರಾರು ಬೈಕ್ರ‍್ಯಾಲಿ
ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ, ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ಕಾರ್ಯಾಲಯದವರೆಗೆ ಸಮುದಾಯದ ಬಾಂಧವರು, ಮುಖಂಡರು ಬೈಕ್ರ‍್ಯಾಲಿ ನಡೆಸಿದರು.

ಬಿ.ವೈ.ವಿಜಯೇಂದ್ರ ಅವರಿಗೆ ಸ್ವಾಗತ
ಬಿಜೆಪಿ ಮುಖಂಡ ಕೆ.ಕರಿಯಪ್ಪ ಹಾಗೂ ಮುಖಂಡರು, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷಿö್ಮ, ನಗರ ಘಟಕದ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರ, ತಾಲೂಕು ಘಟಕದ ಅಧ್ಯಕ್ಷ ವೆಂಕೋಬ ರಾಮತ್ನಾಳ, ನಗರಸಭೆ ಸದಸ್ಯ ಹನುಮೇಶ ಕುರುಕುಂದ, ಮುಖಂಡ ಎಂ.ವೆAಕಟೇಶ, ಪರಮೇಶಪ್ಪ, ಲಿಂಗರಾಜ ಹೂಗಾರ, ಜಯಶ್ರೀರೆಡ್ಡಿ, ಪ್ರೇಮಾ ಸಿದ್ಧಾಂತಿಮಠ, ಭೀಮಣ್ಣ ಒಳಬಳ್ಳಾರಿ, ಬಿಜೆಪಿ ಘಟಕದ ವಿವಿಧ ಪದಾಧಿಕಾರಿಗಳು, ಮುಖಂಡರು ಇದ್ದರು.

ಸಮುದಾಯದ ಸಂಘಟನೆ ಬಲಪಡಿಸಲು ಮನವಿ : ನಾಗರಾಜ ಗಸ್ತಿ
ಸಮುದಾಯದ ಗುರು-ಹಿರಿಯರ ಸಲಹೆ-ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ ತಾಲೂಕು ಕೇಂದ್ರದಲ್ಲಿ ಸಮಾಜ ನೂತನ ಕಾರ್ಯಾಲಯ ಆರಂಭಿಸಲಾಗುತ್ತಿದೆ. ಹಾಗಾಗಿ ಆಯೋಜಿಸಲಾಗಿದೆ. ಸಂಘಟನೆ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಸಮುದಾಯದ ಸರ್ವರೂ ತನು-ಮನ-ಧನದಿಂದ ಸಹಕರಿಸಬೇಕು ಎಂದು ನಗರ ಘಟಕದ ಅಧ್ಯಕ್ಷ ನಾಗರಾಜ ಗಸ್ತಿ ಮನವಿ ಮಾಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್, ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ ಕಲ್ಲೂರು, ಪ್ರಧಾನ ಕಾರ್ಯದರ್ಶಿ ದೇವರಾಜ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ್ ಸಾಸಲಮರಿ, ತಾಲೂಕು ಯುವ ಘಟಕದ ಅಧ್ಯಕ್ಷ ಜಗದೀಶ್‌ಗೌಡ ರೌಡಕುಂದಾ, ಶರಣಬಸವ ನಾಗರಬೆಂಚಿ, ಶಿವು ಉಪ್ಪಲದೊಡ್ಡಿ, ಅಮರೇಶ ಹೊಸಮನಿ, ಸಿದ್ದಪ್ಪ ಬುಕ್ಕನಹಟ್ಟಿ, ಚಂದ್ರು, ಮಂಜು ಪಾಟೀಲ್, ವೀರೇಶ, ನೌಕರ ಘಟಕದ ಅಧ್ಯಕ್ಷ ವೀರೇಶ ತೆರೆದಾಳ, ರಾಜ್ಯ ಕಾರ್ಯದರ್ಶಿ ವೀರೇಶ ಕಲ್ಲೂರು ಹಾಗೂ ಸಮಾಜದ ಹಿರಿಯ ಮುಖಂಡರಾದ ಪಂಪನಗೌಡ ತಾವರಗೇರಾ, ಕಲ್ಲಿನಾಥ ಹಿರೇಗೌಡ್ರು, ಗಸ್ತಿ ವೀರಭದ್ರಪ್ಪ, ಶೇಖರಪ್ಪ ದೋಟಿಹಾಳ, ಶರಣಪ್ಪ ಮಾಲಿ ಪಾಟೀಲ್ ರೌಡಕುಂದಾ, ಗಂಗನಗೌಡ ಮಾಲಿಪಾಟೀಲ್ ರೌಡಕುಂದಾ, ಬಸನಗೌಡ ಬುಕ್ಕನಹಟ್ಟಿ, ವೀರಭದ್ರಪ್ಪ ರಂಗಾಪುರ ಇದ್ದರು.
