ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 23
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯಪ್ಪ ಮೇಟಿ, ತಾಲೂಕು ಕಾರ್ಯದರ್ಶಿಯಾಗಿ ಮಂಜುನಾಥ ಬಾದರ್ಲಿ, ತಾಲೂಕು ಉಪಾಧ್ಯಕ್ಷರಾಗಿ ಅಶೋಕ, ತಾಲೂಕು ಗ್ರಾಮ ಘಟಕದ ಅಧ್ಯಕ್ಷರಾಗಿ ಓಬಳೇಶ ನಾಯಕ, ತಾಲೂಕು ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೋಮಲಿಂಗ ಬೆಳಗುರ್ಕಿ, ಬಾದರ್ಲಿ ಹೋಬಳಿ ಘಟಕದ ಅಧ್ಯಕ್ಷರಾಗಿ ಶರಣಪ್ಪ ಬೆಳಗುರ್ಕಿ, ನಗರ ಘಟಕದ ಉಪಾಧ್ಯಕ್ಷರಾಗಿ ಶ್ರೀಕಾಂತ ಜವಳಿ, ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಆದಿ ಹಿರೇಮಠ, ನಗರ ಘಟಕದ ಕಾರ್ಯದರ್ಶಿಯಾಗಿ ಯಲ್ಲಪ್ಪ ಕೋಣದ್, ತಾಲೂಕು ಸಹಕಾರ್ಯದರ್ಶಿಯಾಗಿ ಚಂದ್ರಶೇಖರ, ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ.ಡಿ. ಹಾಗೂ ಸದಸ್ಯರನ್ನಾಗಿ ಮಲ್ಲಿಕಾರ್ಜುನ ಅವರನ್ನು ನೇಮಕ ಮಾಡಲಾಯಿತು.

