ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 27
ದೇವನಹಳ್ಳಿ ಹಾಗೂ ಚನ್ನರಾಯಪಟ್ಟಣದ ರೈತರಿಂದ ಬಲವಂತದ ಭೂಸ್ವಾಧೀನ ವಿರೋಧಿಸಿ ಜೂನ್ 25ರಂದು ನಡೆದ ‘ದೇವನಹಳ್ಳಿ ಚಲೋ’ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿ ಅವರನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ಸಿಪಿಐ(ಎಂಎಲ್) ಮಾಸ್ಲೈನ್ ತಾಲೂಕು ಸಮಿತಿಯಿಂದ ಗುರುವಾರ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ರವಾನಿಸಲಾಯಿತು.
ರೈತರ ಪರವಾಗಿ ಧ್ವನಿ ಎತ್ತಿದ ಹೋರಾಟಗಾರರು ಸೇರಿದಂತೆ 300 ಜನರನ್ನು ಬಂಧಿಸಿದ್ದು, ಸಿಪಿಐ(ಎಂಎಲ್) ಮಾಸ್ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್, ಕರ್ನಾಟಕ ರೈತ ಸಂಘ ಕೊಪ್ಪಳ ಜಿಲ್ಲೆಯ ಮುಖಂಡರನ್ನು ಅಕ್ರಮವಾಗಿ ಅರೆಸ್ಟ್ ಮಾಡಲಾಗಿದೆ. ಸರ್ಕಾರದ ಈ ಕ್ರಮ ರೈತ ವಿರೋಧಿಯಾಗಿದೆ. ಶಾಂತಿಯುತವಾಗಿ ನಡೆದಿದ್ದ ಹೋರಾಟವನ್ನು ವಿಪರೀತ ಪೊಲೀಸ್ ಬಲವನ್ನು ಬಳಸಿ ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ನಡೆಸಿದೆ. ಕೃಷಿಭೂಮಿಯನ್ನು ರೈತರಿಂದ ಒತ್ತಾಯಪೂರ್ವಕವಾಗಿ ಕಸಿದುಕೊಂಡು ಅಭಿವೃದ್ಧಿ ಹೆಸರಲ್ಲಿ ಕಾರ್ಪೋರೇಟ್ ಬಂಡವಾಳಿಗರಿಗೆ ನೀಡುವ ಸರ್ಕಾರದ ಈ ಹುನ್ನಾರವನ್ನು ಖಂಡನೀಯ ಎಂದು ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ ಕಟುವಾಗಿ ಟೀಕಿಸಿದರು.
ಹೋರಾಟಗಾರರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ದೇವನಹಳ್ಳಿ ಹಾಗೂ ಚನ್ನರಾಯಪಟ್ಟಣ ಭೂಸ್ವಾಧೀನ ಪ್ರಕ್ರಿಯೆನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ರಮೇಶ ಪಾಟೀಲ್ ಹಿರೇಭೇರಿಗಿ, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಭಜಂತ್ರಿ, ತಿಮೋತಿ ಹಂಚಿನಾಳಕ್ಯಾAಪ್, ರಂಗಪ್ಪ, ರಾಮಪ್ಪ, ರಾಜಪ್ಪ, ಅರುಣಮ್ಮ, ಸುವಾರ್ತೆಮ್ಮ, ಆರ್ಶಿರ್ವಾದಮ್ಮ, ರವಿಕುಮಾರ, ಶಿವಣ್ಣ ಇತರರಿದ್ದರು.
