ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 8
ಇದೇ ಡಿಸೆಂಬರ್ 10ರಿಂದ ಡಿ.14 ರವರೆಗೆ ಆಂಧ್ರಪ್ರದೇಶದ ಕಾಕಿನಾಡದ ಜೆಎನ್‌ಟಿಯು ವಿಶ್ವವಿದ್ಯಾಲಯದಲ್ಲಿ ನಡೆಯುವ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಕ್ರೀಡಾಕೂಟಕ್ಕೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ತಂಡಕ್ಕೆ, ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಬಿಎ 5ನೇ ಸೆಮಿಸ್ಟರ್‌ನ ಅಮೀನ್‌ಸಾಬ್ ತಂದೆ ಖಾದರ್‌ಸಾಬ್ ಹಾಗೂ ಬಿಎ 1ನೇ ಸೆಮಿಸ್ಟರ್‌ನ ತಿಮ್ಮಣ್ಣ ತಂದೆ ಪರಮಣ್ಣ ಅವರು ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಪ್ರಾಂಶುಪಾಲ ಪ್ರೊ.ಪಾಂಡು, ಹಿರಿಯ ಪ್ರಾಧ್ಯಾಪಕರಾದ ಪ್ರೊ.ಜಾಜಿ ದೇವೇಂದ್ರಪ್ಪ, ಪ್ರೊ.ಪುಷ್ಪ, ಪ್ರೊ.ಹಿಷರತ ಬೇಗಂ, ಪತ್ರಾಂಕಿತ ವ್ಯವಸ್ಥಾಪಕ ಮೊಹಮ್ಮದ್ ಸಿದ್ದಿಕಿ, ಸಹಾಯಕ ಪ್ರಾಧ್ಯಾಪಕಿ ಜಯಶ್ರೀ ಪಾಟೀಲ್, ಉಪನ್ಯಾಸಕರಾದ ರಾಜೇಶ.ಎಂ., ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ ಡಾ.ಲವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಶಿವ.ಕೆ ಅಭಿನಂದಿಸಿದ್ದಾರೆ.
