ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 2
ಸಾರ್ವಭೌಮತ್ವ ರಾಷ್ಟç ಇರಾನ್ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕಾ ಮತ್ತು ಇಸ್ರೇಲ್ ದೇಶಗಳು ಜಂಟಿ ಬಾಂಬ್ ದಾಳಿ ನಡೆಸುತ್ತಿರುವುದು ಪೈಶಾಚಿಕ ಕೃತ್ಯವಾಗಿದೆ. ಅಮೆರಿಕಾ ಈ ಕೂಡಲೇ ದಾಳಿಯನ್ನು ನಿಲ್ಲಿಸಬೇಕು, ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಶಾಂತಿ ಒಪ್ಪಂದAತೆ ನಡೆದುಕೊಳ್ಳಬೇಕು. ಶಾಂತಿ ಸ್ಥಾಪನೆಗೆ ಭಾರತ ವಿಶ್ವಸಂಸ್ಥೆಯ ಮೇಲೆ ಒತ್ತಡ ತರಬೇಕೆಂದು ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಒತ್ತಾಯಿಸಿದ್ದಾರೆ.
“ಸೌರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಮೆರಿಕಾ ಗಂಭೀರ ಬೆದರಿಕೆ ಒಡ್ಡಿದೆ”
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ತೈಲ ಸಂಪದ್ಭರಿತ ರಾಷ್ಟç ಇರಾನ್ ಮೇಲೆ ನಾಗರಿಕ ಮತ್ತು ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಕ್ರಿಮಿನಲ್ ಮಿಲಿಟರಿ ಆಕ್ರಮಣ ಅಂತಾರಾಷ್ಟಿçÃಯ ಗೂಂಡಾ ವರ್ತನೆಯಲ್ಲದೇ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವದಿಂದ ಕಾಣುವ ವಿಶ್ವಸಂಸ್ಥೆಯ ಸನ್ನದಿನ ಎರಡನೆಯ ವಿಧಿಯ ಉಲ್ಲಂಘನೆಯೂ ಆಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಸಾಮ್ರಾಜ್ಯಶಾಹಿ ಅಮೆರಿಕಾ ದಾಳಿ ನಡೆಸುವ ಮೂಲಕ ಇತರೆ ದೇಶಗಳ ಶಾಂತಿ ಮತ್ತು ಸ್ಥಿರತೆ, ಸೌರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಬೆದರಿಕೆಯೊಡ್ಡಿದೆ. ಅಲ್ಲದೇ, ಕೋಟ್ಯಂತರ ಇರಾನ್ ನಾಗರಿಕರ ಜೀವಕ್ಕೆ ಅಪಾಯವನ್ನುಂಟು ಮಾಡಿದೆ. ಇರಾನ್ ಮೇಲೆ ಪರಮಾಣು ಸಂಗ್ರಹದ ಆರೋಪ ಹೊರಿಸಿ, ಅದರ ಮೇಲೆ ನಡೆಸುತ್ತಿರುವ ದಾಳಿ ಅಮೆರಿಕದ ಭಯೋತ್ಪಾದಕ ಕೃತ್ಯವಾಗಿದೆ. ಸಾಮ್ರಾಜ್ಯಶಾಹಿ ಅಮೆರಿಕಾದ ಆಕ್ರಮಣಕಾರಿ ಸ್ವರೂಪ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳ ಬಗೆಗಿನ ಅದರ ತಿರಸ್ಕಾರವನ್ನು ಇದು ಬಹಿರಂಗಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ನೈಸರ್ಗಿಕ ಸಂಪತ್ತಿನ ರಾಷ್ಟ್ರಗಳ ಮೇಲೆ ಅಮೆರಿಕಾ ಗುರಿ”
ಈಗಾಗಲೇ ಇರಾಕ್, ವೆನುಜುವೆಲಾ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಆರೋಪಿಸಿ ದಾಳಿ ನಡೆಸಿದ್ದಲ್ಲದೇ, ಇಸ್ರೇಲ್‌ನ್ನು ಎತ್ತಿಗಟ್ಟಿ ಪ್ಯಾಲೆಸ್ತೇನ್, ಗಾಜಾದ ಮೇಲೆ, ಉಕ್ರೇನ್ ಎತ್ತಿಗಟ್ಟಿ ರಷ್ಯಾದ ಮೇಲೆ ಪರೋಕ್ಷ ದಾಳಿ ನಡೆಸುತ್ತಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಅಷ್ಟೇ ಅಲ್ಲದೇ ನೈಸರ್ಗಿಕ ಸಂಪಧ್ಬರಿತ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ಸೌರ್ವಭೌಮತ್ವವನ್ನು ಕಿತ್ತೊಗೆಯಲು ಮಿಲಿಟರಿ ದಾಳಿ ನಡೆಸುತ್ತಿರುವ ಅಮೆರಿಕಾ ಮತ್ತು ಅದರ ನೀತಿಗಳು ಇಡೀ ವಿಶ್ವಕ್ಕೆ ಗಂಡಾಂತರಕಾರಿಯಾಗಿದ್ದು, ಇರಾನ್ ಮೇಲಿನ ನಿಜವಾದ ಉದ್ದೇಶ – ಅಲ್ಲಿನ ಜನರ ರಾಷ್ಟ್ರೀಯ ಸಾರ್ವಭೌಮತ್ವ, ರಾಜಕೀಯ ಸ್ವಾತಂತ್ರ‍್ಯ ಮತ್ತು ತಮ್ಮದೇ ಆದ ಅಭಿವೃದ್ಧಿಯ ಮಾರ್ಗವನ್ನು ಆಯ್ಕೆ ಮಾಡುವ ಹಕ್ಕನ್ನು ಕಿತ್ತುಕೊಂಡು, ಅಲ್ಲಿನ ತೈಲ ಮತ್ತು ಖನಿಜ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವುದು ಮತ್ತು ಪ್ರತಿಗಾಮಿ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡು ಬಲವಂತದ ಆಡಳಿತ ಬದಲಾವಣೆಯನ್ನು ಹೇರುವುದಾಗಿದೆ. ತೈಲ ಸಂಪತ್ತನ್ನು ಕೊಳ್ಳೆ ಹೊಡೆಯಲು ಕಳೆದ ಹಲವು ದಶಕಗಳಿಂದ ಅಮೆರಿಕಾ ಅರಬ್ ರಾಷ್ಟçಗಳ ನಡುವೆ ಪರಸ್ಪರ ಹಗೆತನವನ್ನು ಸೃಷ್ಟಿಸಿ ಅದರ ದುರ್ಲಾಭವನ್ನು ಪಡೆದುಕೊಳ್ಳುತ್ತ ಬಂದಿದೆ. ಹಾಗಾಗಿ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾಜವಾದಿ ಆಶಯದ ರಾಷ್ಟçಗಳು ಒಗ್ಗೂಡಿ ಸಾಮ್ರಾಜ್ಯಶಾಹಿ, ಫ್ಯಾಶಿಸ್ಟ್ ಅಮೆರಿಕಾ ಸೇರಿದಂತೆ ಅದರ ಬೆಂಬಲಕ್ಕಿರುವ ರಾಷ್ಟçಗಳಿಗೆ ಬುದ್ಧಿ ಕಲಿಸದೇ ಹೋದರೆ, ಶಾಂತಿ-ಸುವ್ಯವಸ್ಥೆ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮತ್ತು ಪ್ರಜಾತಂತ್ರಕ್ಕೆ ಉಳಿಗಾಲವಿಲ್ಲ” ಎಂದು ನಾಗರಾಜ ಪೂಜಾರ್ ತಿಳಿಸಿದ್ದಾರೆ.
