ಸಿಂಧನೂರು: ಅಂಬಾದೇವಿ ಜಾತ್ರಾ ಮಹೋತ್ಸವ: ಶಾಸಕ ಹಂಪನಗೌಡರಿಂದ ಲೋಗೋ ಬಿಡುಗಡೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 30

ಸುಕ್ಷೇತ್ರ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವ ಜನವರಿ 02-01-2026 ರಿಂದ ಜನವರಿ 06-01-2026 ರವರೆಗೆ ಜರುಗಲಿದ್ದು, ಜನವರಿ 3ರಂದು ನಡೆಯಲಿರುವ ಅಂಬಾದೇವಿ ಮಹಾರಥೋತ್ಸವ ಮತ್ತು ಜಂಬೂ ಸವಾರಿ ಹಿನ್ನೆಲೆಯಲ್ಲಿ ಶಾಸಕ ಹಂಪಗೌಡ ಬಾದರ್ಲಿ ಅವರು ಜಾತ್ರೆಯ ಲೋಗೋ ಬಿಡುಗಡೆಗೊಳಿಸಿದರು.
ನಗರದ ಕಾಕತೀಯ ಕ್ಲಬ್ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿಎಂ ಹಾಗೂ ಡಿಸಿಎಂ ಜ.3ರಂದು ಮಧ್ಯಾಹ್ನ 2 ಗಂಟೆಗೆ ನಗರಕ್ಕೆ ಆಗಮಿಸುವರು. ಅಂದು ನಗರದಲ್ಲಿ ಮಧ್ಯಾಹ್ನ 2 ರಿಂದ 2:30 ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಮಧ್ಯಾಹ್ನ ಭೋಜನದ ವಿರಾಮದ ನಂತರ 3:30 ರಿಂದ ಅಂಬಾಮಠಕ್ಕೆ ತೆರಳಿ ಸಂಜೆ 4 ಗಂಟೆಗೆ, ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 400 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಅಂಬಾದೇವಿ ಮಹಾ ರಥೋತ್ಸವ ಮತ್ತು ಜಂಬೂಸವಾರಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅರುಣ ದೇಸಾಯಿ, ತಾಪಂ ಇಒ ಚಂದ್ರಶೇಖರ, ಮುಖಂಡರಾದ ಆರ್.ಸಿ.ಪಾಟೀಲ, ಖಾಜಿ ಮಲಿಕ್ ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *